ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತ-ಪಾಕಿಸ್ತಾನ ಯುದ್ಧದ 60ನೇ ವಾರ್ಷಿಕೋತ್ಸವದ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿ ಸೌತ್‌ಬ್ಲಾಕ್‌ನಲ್ಲಿ ಯುದ್ಧದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಅವರು, “ಭಾರತ ತನ್ನ ನೆರೆಹೊರೆಯವರೊಂದಿಗಿನ ಸಂಬಂಧದಲ್ಲಿ ಎಂದಿಗೂ ಅದೃಷ್ಟಶಾಲಿಯಾಗಿಲ್ಲ. ಆದರೆ ಭಾರತ ತನ್ನ ಭವಿಷ್ಯವನ್ನು ಬೇರೆಯವರ ಕೈಗೆ ಬಿಟ್ಟುಕೊಡುವುದಿಲ್ಲ, ತಾನೇ ರೂಪಿಸಿಕೊಳ್ಳುತ್ತದೆ. ಇದರ ಇತ್ತೀಚಿನ ಉದಾಹರಣೆ ಆಪರೇಷನ್ ಸಿಂಧೂರ್” ಎಂದು ಹೇಳಿದರು.
ರಾಜನಾಥ್ ಸಿಂಗ್ ಅವರು 1965ರ ಯುದ್ಧವು ಸಣ್ಣ ಸಂಘರ್ಷವಲ್ಲ, ಭಾರತದ ಶಕ್ತಿಯ ಪರೀಕ್ಷೆಯಾಗಿತ್ತು ಎಂದು ನೆನಪಿಸಿದರು. ಆ ಸಮಯದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ನಾಯಕತ್ವವು ದೇಶಕ್ಕೆ ಧೈರ್ಯ ತುಂಬಿತು ಮತ್ತು ಅವರ “ಜೈ ಜವಾನ್, ಜೈ ಕಿಸಾನ್” ಘೋಷಣೆ ಇಂದಿಗೂ ಪ್ರತಿಧ್ವನಿಸುತ್ತದೆ ಎಂದರು.
ಅವರು ಪಹಲ್ಗಾಮ್ ದಾಳಿಯ ನೆನಪನ್ನು ಸ್ಮರಿಸಿ, ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ಪ್ರತಿರೋಧ ಮತ್ತು ಶಕ್ತಿ ಶತ್ರುಗಳಿಗೆ ತೋರಿಸಲ್ಪಟ್ಟಿತು ಎಂದರು. 1965ರ ಫಿಲೋರಾ ಮತ್ತು ಚಾವಿಂದಾ ಕದನಗಳಲ್ಲಿ ಭಾರತೀಯ ಸೈನ್ಯದ ಶೌರ್ಯ ಇತಿಹಾಸದಲ್ಲಿ ದಾಕಲಾಗಿದೆ ಎಂದು ಹೇಳಿದರು. ವಿಶೇಷವಾಗಿ ವೀರ ಅಬ್ದುಲ್ ಹಮೀದ್ ಅವರ ಶೌರ್ಯವನ್ನು ಉಲ್ಲೇಖಿಸಿ, “ಧೈರ್ಯ, ಸಂಯಮ ಮತ್ತು ದೇಶಭಕ್ತಿ ಅಸಾಧ್ಯವನ್ನು ಸಾಧ್ಯವಾಗಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa