ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭೀಮಾತೀರದಲ್ಲಿ ನಡೆದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬ್ಯಾಂಕ್‌ನಲ್ಲಿ ದರೋಡೆ ಮಾಡಿದ ಚಿನ್ನದ ಬ್ಯಾಗ್ ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ಹುಲಜಂತಿ ಗ್ರಾಮದ ಮನೆಯ ಮೇಲೆ ಇಂದು ಬೆಳಗ್ಗೆ ಸಿಕ್ಕಿದೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಸೆಪ್ಟೆಂಬರ್ 16ರ ಸಂಜೆ ಬಾಳೆ ಎಸ್‌ಬಿಐ ಬ್ಯಾಂಕ್‌ನಲ್ಲಿನ ಸಿಬ್ಬಂದಿಗಳಿಗೆ ಮೂವರು ಮಾಸ್ಕ್ ಧರಿಸಿ, ಗನ್ ತೋರಿಸಿ ದರೋಡೆ ಮಾಡಿದ್ದರು.
ಪತ್ತೆಯಾಗಿರುವ ಬ್ಯಾಗ್‌ನಲ್ಲಿ ಎಷ್ಟು ಚಿನ್ನ, ನಗದು ಇದೆ ಎಂದು ಚಡಚಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದರೋಡೆ ನಡೆದ ಎರಡು ದಿನದ ಬಳಿಕ ಬ್ಯಾಗ್ ಪತ್ತೆಯಾಗಿದೆ. ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande