ಸಿಂಗಾಪುರ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಸಿದ್ಧ ಅಸ್ಸಾಮಿ ಹಾಗೂ ಬಾಲಿವುಡ್ ಗಾಯಕ ಜುಬೀನ್ ಗಾರ್ಗ್ (52) ಸಿಂಗಾಪುರದಲ್ಲಿ ನಡೆದ ಸ್ಕೂಬಾ ಡೈವಿಂಗ್ ಅಪಘಾತದಲ್ಲಿ ನಿಧನರಾಗಿದ್ದಾರೆ
ಮಾಹಿತಿಯ ಪ್ರಕಾರ, ಜುಬೀನ್ ಗಾರ್ಗ್ ಈಶಾನ್ಯ ಭಾರತ ಉತ್ಸವ ಕಾರ್ಯಕ್ರಮಕ್ಕಾಗಿ ಸಿಂಗಾಪುರಕ್ಕೆ ಬಂದಿದ್ದರು. ವಿಶ್ರಾಂತಿ ವೇಳೆಯಲ್ಲಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಉಸಿರಾಟದಲ್ಲಿ ತೊಂದರೆ ಅನುಭವಿಸಿದ್ದಾರೆ. ತಕ್ಷಣವೇ ಸಿಂಗಾಪುರ ಪೊಲೀಸರು ಅವರನ್ನು ಸಮುದ್ರದಿಂದ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು, ತುರ್ತು ಚಿಕಿತ್ಸೆ ನೀಡಿದರು ಚಿಕಿತ್ಸೆ ಗೆ ಸ್ಪಂದಿಸದೆ ನಿಧನರಾಗಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮೂಲಕ ಶೋಕ ವ್ಯಕ್ತಪಡಿಸಿ “ಅಸ್ಸಾಂ ತನ್ನ ಮೆಚ್ಚಿನ ಪುತ್ರನೊಬ್ಬನನ್ನು ಕಳೆದುಕೊಂಡಿದೆ” ಎಂದು ಸಂತಾಪ ಸೂಚಿಸಿದ್ದಾರೆ. ಸಂಗೀತ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಹಾಗೂ ಸಂಸ್ಕೃತಿ ಲೋಕದ ದಿಗ್ಗಜರು ಗಾರ್ಗ್ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.
ಜುಬೀನ್ ಗಾರ್ಗ್ ಅವರು “ಯಾ ಅಲಿ” (ಗ್ಯಾಂಗ್‌ಸ್ಟರ್ ಚಿತ್ರ) ಸೇರಿದಂತೆ ಅನೇಕ ಜನಪ್ರಿಯ ಹಾಡುಗಳಿಂದ ದೇಶಾದ್ಯಂತ ಜನಪ್ರಿಯತೆ ಗಳಿಸಿದ್ದರು. ಅಸ್ಸಾಂನ ಸಂಗೀತ, ಸಂಸ್ಕೃತಿ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರವಹಿಸಿದ ಅವರು, ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa