ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಕೋಲ್ಕತ್ತಾದಲ್ಲಿ ಆರಂಭವಾಗುವ 16ನೇ ಜಂಟಿ ಕಮಾಂಡರ್‌ಗಳ ಸಮ್ಮೇಳನವನ್ನು ಅವರು ಉದ್ಘಾಟಿಸಲಿದ್ದಾರೆ.
ಕೋಲ್ಕತ್ತಾ ಕಾರ್ಯಕ್ರಮದ ನಂತರ ಪ್ರಧಾನಿ ಮಧ್ಯಾಹ್ನ 2.30ಕ್ಕೆ ಬಿಹಾರದ ಪೂರ್ಣಿಯಾ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಬಳಿಕ, ಸುಮಾರು9 36,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ವೇಳೆ ರಾಷ್ಟ್ರೀಯ ಮಖಾನಾ ಮಂಡಳಿ ಸ್ಥಾಪನೆ, ಹೊಸ ರೈಲು ಮಾರ್ಗ ಹಾಗೂ ರೈಲು ಸೇವೆ ಉದ್ಘಾಟನೆ ನಡೆಯಲಿದೆ. ಪೂರ್ಣಿಯಾ ವಿಮಾನ ನಿಲ್ದಾಣದ ಉದ್ಘಾಟನೆ ಈ ಪ್ರವಾಸದ ಪ್ರಮುಖ ಅಂಶವಾಗಿದ್ದು, ಇದು ಕೋಲ್ಕತ್ತಾ ನಂತರ ಪೂರ್ವ ಭಾರತದ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa