ಜಾರ್ಖಂಡ್: ನಕ್ಸಲ್ ಸಹದೇವ್ ಸೊರೆನ್ ಸೇರಿದಂತೆ ಮೂವರ ಸಾವು
ಹಜಾರಿಬಾಗ್, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 1 ಕೋಟಿ ರೂ. ಬಹುಮಾನಿತ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಸಹದೇವ್ ಸೊರೆನ್ ಅಲಿಯಾಸ್ ಪ್ರವೇಶ್ ಸೇರಿದಂತೆ ಮೂವರು ನಕ್ಸಲರು ಹತ್ಯೆಗೀಡಾಗಿದ್ದಾರೆ. ಸಾವನ್ನಪ್ಪಿದವರಲ್ಲಿ ಎಸ
ಜಾರ್ಖಂಡ್: ನಕ್ಸಲ್ ಸಹದೇವ್ ಸೊರೆನ್ ಸೇರಿದಂತೆ ಮೂವರ ಸಾವು


ಹಜಾರಿಬಾಗ್, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 1 ಕೋಟಿ ರೂ. ಬಹುಮಾನಿತ ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಸಹದೇವ್ ಸೊರೆನ್ ಅಲಿಯಾಸ್ ಪ್ರವೇಶ್ ಸೇರಿದಂತೆ ಮೂವರು ನಕ್ಸಲರು ಹತ್ಯೆಗೀಡಾಗಿದ್ದಾರೆ.

ಸಾವನ್ನಪ್ಪಿದವರಲ್ಲಿ ಎಸ್‌ಎಸಿ ಸದಸ್ಯ ರಘುನಾಥ್ ಹೆಂಬ್ರಾಮ್ ಅಲಿಯಾಸ್ ಚಂಚಲ್ ಹಾಗೂ ವಲಯ ಕಮಾಂಡರ್ ಬಿರ್ಸೆನ್ ಗಂಜು ಸೇರಿದ್ದಾರೆ.

ಗಿರ್ಹೋರ್ ಠಾಣಾ ವ್ಯಾಪ್ತಿಯ ಪಣತಿತ್ರಿ ಅರಣ್ಯದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದ ಈ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿದ್ದು, ಸ್ಥಳದಿಂದ ಮೂರು ಎಕೆ-47 ರೈಫಲ್‌ಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಕೋಬ್ರಾ, ಗಿರಿದಿಹ್ ಹಾಗೂ ಹಜಾರಿಬಾಗ್ ಪೊಲೀಸರ ಜಂಟಿ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande