ಇಂದೋರ್‌ ಗೆ ಡಾ. ಮೋಹನ್ ಭಾಗವತ್
ಇಂದೋರ್, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರು ಭಾನುವಾರ ಮಧ್ಯಾಹ್ನ 2.30ಕ್ಕೆ ಇಂದೋರ್‌ನ ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಪರಿಕ್ರಮ ಕೃಪಾ ಸಾರ್’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮಧ್ಯಪ್ರದೇಶ
Mohan bhagwat


ಇಂದೋರ್, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರು ಭಾನುವಾರ ಮಧ್ಯಾಹ್ನ 2.30ಕ್ಕೆ ಇಂದೋರ್‌ನ ಬ್ರಿಲಿಯಂಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ‘ಪರಿಕ್ರಮ ಕೃಪಾ ಸಾರ್’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಸೇರಿದಂತೆ ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಚಿವರು ವಿಶ್ವಾಸ್ ಸಾರಂಗ್, ರಾಕೇಶ್ ಶುಕ್ಲಾ, ಚೈತನ್ಯ ಕಶ್ಯಪ್ ಮೊದಲಾದ ಗಣ್ಯರು ಉಪಸ್ಥಿತರಿರಲಿದ್ದಾರೆ.

ಈ ಪುಸ್ತಕವನ್ನು ನರ್ಮದಾ ಪರಿಕ್ರಮ ಕೈಗೊಂಡ ಗ್ರಾಮೀಣಾಭಿವೃದ್ಧಿ ಸಚಿವ ಪ್ರಹ್ಲಾದ್ ಪಟೇಲ್ ಬರೆದಿದ್ದು, ತಮ್ಮ 1994-96 ಹಾಗೂ 2005ರ ಯಾತ್ರೆಗಳ ಅನುಭವಗಳನ್ನು ಒಳಗೊಂಡಿದೆ. 30 ವರ್ಷಗಳ ಹಿಂದೆ ಜಬಲ್ಪುರದಲ್ಲಿ ಬರೆದ ಲೇಖನಗಳೂ ಈ ಕೃತಿಯಲ್ಲಿ ಸೇರಿವೆ. ಪುಸ್ತಕವು ನದಿ ಸಂರಕ್ಷಣೆ ಹಾಗೂ ಜಲ ಪುಷ್ಟೀಕರಣದ ಜಾಗೃತಿಗೆ ಸಹಾಯಕವಾಗಲಿದೆ ಎಂದು ಸಚಿವ ಪಟೇಲ್ ತಿಳಿಸಿದ್ದಾರೆ.

ಇದರ ಜೊತೆ ಗೆ, ಡಾ. ಭಾಗವತ್ ಅವರು ಇಂದೋರ್‌ನ ಪಿಪಲ್ಯಪಾಲ ಕೊಳದ ಮಧುರ್ ಮಿಲನ್ ಗಾರ್ಡನ್‌ನಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಪರಿಷತ್‌ನ ಅಖಿಲ ಭಾರತ ಕಾನೂನು ಕೋಶದ ನಾಲ್ಕನೇ ಸಮಾವೇಶದಲ್ಲೂ ಭಾಗವಹಿಸಲಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಬಂದಿರುವ 250 ಕ್ಕೂ ಹೆಚ್ಚು ಹಿರಿಯ ವಕೀಲರು, ನಿವೃತ್ತ ನ್ಯಾಯಾಧೀಶರು ಮತ್ತು ಕಾನೂನು ತಜ್ಞರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande