ನಾಳೆ ವಿದ್ಯುತ್ ವ್ಯತ್ಯಯ
ಸಂಡೂರು, 13 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಚೋರನೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಸೆಪ್ಟಂಬರ್‌ 14 ರಂದು ಬೆಳಗ್ಗೆ 9 ರಂದು ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಯಶವಂತನಗರ, ನಿಡುಗುರ್ತಿ, ಬಂಡ್ರಿ, ಹೆಚ
ನಾಳೆ  ವಿದ್ಯುತ್ ವ್ಯತ್ಯಯ


ಸಂಡೂರು, 13 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಚೋರನೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಸೆಪ್ಟಂಬರ್‌ 14 ರಂದು ಬೆಳಗ್ಗೆ 9 ರಂದು ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಯಶವಂತನಗರ, ನಿಡುಗುರ್ತಿ, ಬಂಡ್ರಿ, ಹೆಚ್‌ಕೆ ಹಳ್ಳಿ, ಸೋವೆನಹಳ್ಳಿ, ಅಗ್ರಹಾರ, ಕಾಳಿಂಗೇರಿ, ಚೋರನೂರು, ಬೊಮ್ಮಗಟ್ಟ, ಯರ್ರೆಯ್ಯನಹಳ್ಳಿ ಮತ್ತು ಗೊಲ್ಲಲಿಂಗಮನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತಯ ಉಂಟಾಗಲಿದೆ. ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಜೆಸ್ಕಾಂನ ಸಂಡೂರು ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕೆ.ಎ.ಉಮೇಶ ಕುಮಾರ್‌ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande