ಹೊಸಪೇಟೆ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ನಾಳೆ ಬೆ.7 ಗಂಟೆಗೆ, ವಿಶ್ವ ಪರಂಪರೆ ತಾಣವಾದ ಹಂಪೆಯ ವಿಜಯ ವಿಠಲ ದೇವಸ್ಥಾನದಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಬೈಕ್ ರ‍್ಯಾಲಿ ಗೆ ಚಾಲನೆ ನೀಡಲಿದ್ದಾರೆ.
ಹಂಪೆಯ ವಿಜಯ ವಿಠಲ ದೇವಸ್ಥಾನದಿಂದ ಆರಂಭಗೊಂಡು ಕಮಲಾಪುರ, ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ, ಕಡ್ಡಿರಾಂಪುರ, ಮಲಪನಗುಡಿ, ಕನಕದಾಸವೃತ್ತ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ವೃತ್ತ, ಅಂಬೇಡ್ಕರ್ ವೃತ್ತ, ವಿಎನ್‍ಸಿ ಕಾಲೇಜು, ಸಾಯಿಬಾಬಾ ಸರ್ಕಲ್, ಗುರು ಪಿಯು ಕಾಲೇಜು, ರಾಷ್ಟ್ರೀಯ ಹೆದ್ದಾರಿ ಮೂಲಕ ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ವಿಧಾನ ಸೌಧ ತಲುಪಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ.ಕಾಳೆ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್