ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆ ಅಭಿವೃದ್ಧಿ‌ ಕಾರ್ಯಕ್ರಮ
ವಿಜಯಪುರ, 12 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆ ಅಭಿವೃದ್ಧಿ(Curriculum Vitae)ಕಾರ್ಯಕ್ರಮ ಬರವಣಿಗೆ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಪ
ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆ ಅಭಿವೃದ್ಧಿ‌ ಕಾರ್ಯಕ್ರಮ


ವಿಜಯಪುರ, 12 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆ ಅಭಿವೃದ್ಧಿ(Curriculum Vitae)ಕಾರ್ಯಕ್ರಮ ಬರವಣಿಗೆ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಎ.ಎಸ್.ಪಿ‌ ಕಾಮರ್ಸ್ ಕಾಲೇಜಿನ ಎಂ.ಬಿ.ಎ ವಿಭಾಗದ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ ಮಾತನಾಡಿ, ವೃತ್ತಿಪರ ಸ್ವವಿವರ ಮಾಹಿತಿ ಬರವಣಿಗೆಯಲ್ಲಿ ಇರಬೇಕಾದ ಘಟಕಾಂಶಗಳ ಕುರಿತು ಸವಿವರವಾಗಿ ಮಾಹಿತಿ ನೀಡಿದರು.

ಇದೇ ವೇಳೆ ಪ್ರಶಿಕ್ಷಣಾರ್ಥಿಗಳಿಗೆ ಮಾದರಿ ಬರವಣಿಗೆಯನ್ನು ಸಿದ್ಧಪಡಿಸಿ ತೋರಿಸಿದರು.

ಈ ಸಂದರ್ಭದಲ್ಲಿ‌ ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ವೈ. ಖಾಸನಿಸ, ಸಹಪ್ರಾಧ್ಯಾಪಕ ಡಾ. ಎಂ. ಎಸ್. ಹಿರೇಮಠ, ಡಾ.ಎಂ.ಬಿ. ಕೋರಿ, ಸಹಾಯಕ ಪ್ರಾಧ್ಯಾಪಕ ಡಾ. ಜೆ.ಎಸ್. ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್. ಎಸ್. ಪಾಟೀಲ, ಪಿ. ಡಿ ಮುಲ್ತಾನಿ, ಡಾ. ಎಸ್.ಪಿ. ಶೇಗುಣಸಿ, ಮಲ್ಲಯ್ಯ ಎಸ್. ಹಿರೇಮಠ ದೈಹಿಕ ಶಿಕ್ಷಣ ನಿರ್ದೇಶಕ ಎಂ. ಪಿ. ಕುಪ್ಪಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿ ವೈಷ್ಣವಿ ಹಡಪದ ನಿರೂಪಿಸಿ, ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande