ವಾರಣಾಸಿ, 12 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಾರಿಷಸ್ ಪ್ರಧಾನಿ ಡಾ. ನವೀನ್‌ಚಂದ್ರ ರಾಮಗೂಲಂ ಅವರು ತಮ್ಮ ಭಾರತ ಪ್ರವಾಸದ ಕೊನೆಯ ದಿನವಾದ ಶುಕ್ರವಾರ ಶ್ರೀ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿದರು.
ಪತ್ನಿ ವೀಣಾ ರಾಮಗೂಲಂ ಅವರೊಂದಿಗೆ ಗರ್ಭಗುಡಿಯಲ್ಲಿ ಬಾಬಾ ವಿಶ್ವನಾಥರ ಜ್ಯೋತಿರ್ಲಿಂಗಕ್ಕೆ ಅಭಿಷೇಕ ಸಲ್ಲಿಸಿ, ಮಾರಿಷಸ್ ಜನರ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಿದರು.
ವೇದ ಮಂತ್ರಗಳ ಪಠಣದ ಮಧ್ಯೆ ನಡೆದ ಪೂಜೆಯಲ್ಲಿ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹಾಗೂ ಸಚಿವ ಸುರೇಶ್ ಖನ್ನಾ ಉಪಸ್ಥಿತರಿದ್ದರು.
ದೇವಸ್ಥಾನ ಟ್ರಸ್ಟ್ ವತಿಯಿಂದ ಪ್ರಧಾನ ಮಂತ್ರಿಗೆ ಅಂಗವಸ್ತ್ರ, ಪ್ರಸಾದ ಮತ್ತು ಸ್ಮರಣಿಕೆ ನೀಡಲಾಯಿತು. ಕಾಶಿ ವಿಶ್ವನಾಥ ಧಾಮದ ಹೊಸ ಭವ್ಯ ರೂಪವನ್ನು ಕಂಡು ರಾಮಗೂಲಂ ದಂಪತಿ ಸಂತಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa