ಜಾಗತಿಕ ಕರಾವಳಿ ರಕ್ಷಣಾ ಶೃಂಗಸಭೆ : ಭಾರತದ ಪಾತ್ರಕ್ಕೆ ಮೆಚ್ಚುಗೆ
ನವದೆಹಲಿ, 12 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಇಟಲಿಯ ರೋಮ್‌ನಲ್ಲಿ ನಡೆದ 4ನೇ ಜಾಗತಿಕ ಕರಾವಳಿ ರಕ್ಷಣಾ ಪಡೆ ಶೃಂಗಸಭೆ ಶುಕ್ರವಾರ ಮುಕ್ತಾಯಗೊಂಡಿತು. 115 ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಪಾಲ್ಗೊಂಡ ಈ ಶೃಂಗಸಭೆಯಲ್ಲಿ ಕಡಲ ಅಪರಾಧಗಳ ವಿರುದ್ಧ ಹೋರಾಟ, ಸುರಕ್ಷತೆ ಹಾಗೂ ಪರಿಸರ ಸಂರಕ್ಷಣ
Meet


ನವದೆಹಲಿ, 12 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಇಟಲಿಯ ರೋಮ್‌ನಲ್ಲಿ ನಡೆದ 4ನೇ ಜಾಗತಿಕ ಕರಾವಳಿ ರಕ್ಷಣಾ ಪಡೆ ಶೃಂಗಸಭೆ ಶುಕ್ರವಾರ ಮುಕ್ತಾಯಗೊಂಡಿತು. 115 ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳು ಪಾಲ್ಗೊಂಡ ಈ ಶೃಂಗಸಭೆಯಲ್ಲಿ ಕಡಲ ಅಪರಾಧಗಳ ವಿರುದ್ಧ ಹೋರಾಟ, ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಯಿತು.

ಭಾರತೀಯ ಕರಾವಳಿ ರಕ್ಷಣಾ ಪಡೆ ಮಹಾನಿರ್ದೇಶಕ ಪರಮೇಶ್ ಶಿವಮಣಿ ನೇತೃತ್ವದ ನಿಯೋಗ ಭಾಗವಹಿಸಿದ್ದು, “ಬೆಂಕಿ ತುರ್ತು ಪರಿಸ್ಥಿತಿಗಳಲ್ಲಿ ಐಸಿಜಿಯ ಕಾರ್ಯತಂತ್ರ” ವಿಷಯದಲ್ಲಿ ಉಪನ್ಯಾಸ ನೀಡಿದರು. ಭಾರತವು ಕಡಲ ಭದ್ರತೆ ಮತ್ತು ಸಮುದ್ರ ಆಡಳಿತದಲ್ಲಿ ತನ್ನ ಪರಿಣತಿ ಹಾಗೂ ರಚನಾತ್ಮಕ ಪಾತ್ರವನ್ನು ಪ್ರಸ್ತುತಪಡಿಸಿತು.

ಐಸಿಜಿ 2027ರಲ್ಲಿ ನಡೆಯಲಿರುವ 5ನೇ ಶೃಂಗಸಭೆಯ ಅಧ್ಯಕ್ಷತೆಯ ಹಕ್ಕಿಗಾಗಿ ಬಿಡ್ ಮಾಡುವುದಾಗಿ ಘೋಷಿಸಿದೆ. ಐಸಿಜಿ ಕಮಾಂಡೆಂಟ್ ಅಮಿತ್ ಉನಿಯಾಲ್ ಅವರು “ಸುರಕ್ಷಿತ, ಸ್ವಚ್ಛ ಹಾಗೂ ಭದ್ರವಾದ ಸಮುದ್ರಗಳಿಗಾಗಿ ಜಾಗತಿಕ ಕಾರ್ಯತಂತ್ರ ರೂಪಿಸುವಲ್ಲಿ ಭಾರತ ಪ್ರಮುಖ ಪಾಲುದಾರ” ಎಂದು ಹೇಳಿದ್ದಾರೆ.

2017ರಿಂದ ಜಪಾನ್ ಕೋಸ್ಟ್ ಗಾರ್ಡ್ ಮತ್ತು ನಿಪ್ಪಾನ್ ಫೌಂಡೇಶನ್ ಪ್ರಾರಂಭಿಸಿದ ಈ ಶೃಂಗಸಭೆ, ಕರಾವಳಿ ಪಡೆಗಳ ನಡುವೆ ವಿಶ್ವಾಸ ಹಾಗೂ ಸಹಕಾರ ವೃದ್ಧಿಗೆ ವೇದಿಕೆಯಾಗಿದೆ. ಈ ಬಾರಿ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಜಪಾನ್ ಪ್ರಧಾನಿ ಶಿಗೇರು ಇಶಿಬಾ ವರ್ಚುವಲ್ ಸಂದೇಶ ನೀಡಿ ಸಹಕಾರದ ಅಗತ್ಯತೆಯನ್ನು ಒತ್ತಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande