ಬಳ್ಳಾರಿ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹಿರಿಯ ನಾಗರಿಕರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೆ.16 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕಂಟೋನ್‌ಮೆ0ಟ್‌ನ ಎನ್‌ಸಿಸಿ ಆಫೀಸ್ ಹಿಂಭಾಗದ ಬಳ್ಳಾರಿ ವೈದ್ಯಕೀಯ ಸಂಸ್ಥೆ ಹಾಗೂ ಸಂಶೋಧನಾ ಕೇಂದ್ರ (ಬಿಎಂಸಿಆರ್‌ಸಿ) ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ.
*ಕ್ರೀಡಾ ಸ್ಪರ್ಧೆಗಳು:*
60 ರಿಂದ 70 ವರ್ಷದವರಿಗೆ ಮ್ಯೂಜಿಕಲ್ ಚೇರ್, 60 ರಿಂದ 69 ವರ್ಷ ಮತ್ತು 70 ವರ್ಷ ಮೇಲ್ಪಟ್ಟವರಿಗೆ ಬಿರುಸಿನ ನಡಿಗೆ, 60 ರಿಂದ 69 ವರ್ಷ ಮತ್ತು 70 ವರ್ಷ ಮೇಲ್ಪಟ್ಟವರಿಗೆ ಬಕೆಟ್‌ನಲ್ಲಿ ಬಾಲ್ ಎಸೆಯುವುದು. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದು.
*ಸಾಂಸ್ಕೃತಿಕ ಸ್ಪರ್ಧೆಗಳು:*
60 ರಿಂದ 69 ವರ್ಷ ಮತ್ತು 70 ವರ್ಷ ಮೇಲ್ಪಟ್ಟವರಿಗೆ ಗಾಯನ ಸ್ಪರ್ಧೆ ಮತ್ತು 60 ರಿಂದ 69 ವರ್ಷ ಮತ್ತು 70 ವರ್ಷ ಮೇಲ್ಪಟ್ಟವರಿಗೆ ಏಕಪಾತ್ರಾಭಿನಯ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದು.
ಸೂಚನೆ : ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸುವ ಹಿರಿಯ ನಾಗರಿಕರು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಯಾವುದಾದರೂ ಒಂದು ಸ್ಪರ್ಧೆಗೆ ಮಾತ್ರ ಅವಕಾಶ ಇರುತ್ತದೆ. ಆಸಕ್ತ ಹಿರಿಯ ನಾಗರಿಕರು ತಮ್ಮ ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್‌ಕಾರ್ಡ್ ಪ್ರತಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಟ್ಟದ ಎಂಆರ್‌ಡಬ್ಲ್ಯೂ ಸಿ.ರಾಣಿ (ಬಳ್ಳಾರಿ/ಕಂಪ್ಲಿ) ಮೊ.8880875620, ಸಾಬೇಶ್ (ಸಿರುಗುಪ್ಪ) ಮೊ.9743509698, ಸಿ.ಕರಿಬಸಜ್ಜ (ಸಂಡೂರು) ಮೊ.9632052270, ಆರ್.ರೇವಣ್ಣ (ಕುರುಗೋಡು) ಮೊ.9538000887 ಹಾಗೂ ಕಚೇರಿ ದೂ.08392-267886 ಮತ್ತು ಯೋಜನಾ ಸಹಾಯಕ ಜಿ.ಚಿದಾನಂದ ಮೊ.9972813152 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್