ವಿಜಯಪುರ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2025 ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ರಾಜ್ಯ ಇ- ಆಡಳಿತ ಇಲಾಖೆಯ ನಾಗರಿಕರಿಗೆ ವಿದ್ಯುನ್ಮಾನ ಸೇವೆ ಪೂರೈಕೆ ನಿರ್ದೇಶಕ(Electronic Delivery Of Citizen Services) ಟಿ. ಭೂಬಾಲನ್ ಅವರಿಗೆ ಆಹ್ವಾನ ನೀಡಲಾಗಿದ್ದು, ಈ ಆಮಂತ್ರಣಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಇಂದು ಬುಧವಾರ ಬೆಂಗಳೂರಿನಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2025ರ ರಾಯಭಾರಿ ಮತ್ತು ಭಾರತೀಯ ರೇಲ್ವೆಯ ಹಿರಿಯ ಅಧಿಕಾರಿ ಪ್ರವೀಣ ಕಾತರಕಿ ಮತ್ತು ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರು
ಟಿ. ಭೂಬಾಲನ್ ಅವರನ್ನು ಭೇಟಿಯಾಗಿ ಹೆರಿಟೇಜ್ ರನ್ ನಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿ. ಭೂಬಾಲನ್ ಅವರು, ಬಸವನಾಡಿನ ಕೋಟಿ ವೃಕ್ಷ ಅಭಿಯಾನದ ಯಶೋಗಾಥೆ ವಿಶ್ವಖ್ಯಾತಿಯ ನ್ಯೂಯಾರ್ಕ್ ಟೈಮ್ಸ್ ನಲ್ಲಿ ವಿಶೇಷ ವರದಿಯಾಗಿ ಪ್ರಕಟವಾಗಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ವಿಜಯಪುರ ಜಿಲ್ಲಾಧಿಕಾರಿಯಾಗಿ ನಾನೂ ಕೂಡ ಈ ಅಭಿಯಾನದಲ್ಲಿ ಅಳಿಲು ಸೇವೆ ಸಲ್ಲಿಸಿದ ಬಗ್ಗೆ ಸಂತಸವಿದೆ. ಸಚಿವ ಎಂ. ಬಿ. ಪಾಟೀಲ ಅವರ ಕನಸಿನ ಈ ಅಭಿಯಾನಕ್ಕೆ ಬಸವನಾಡಿನ ನೀಡಿರುವ ಸ್ಪಂದನೆ ಸ್ಮರಣೀಯವಾಗಿದೆ. ಅಷ್ಟೇ ಅಲ್ಲ, ವಿಜಯಪುರ ಜಿಲ್ಲೆಯ ಜನ ಭಾವನಾತ್ಮಕವಾಗಿ ಜಲ, ವೃಕ್ಷ, ಶಿಕ್ಷಣ, ಆರೋಗ್ಯದ ಬಗ್ಗೆ ಹೊಂದಿರುವ ಅಪಾರ ಕಾಳಜಿಯಿಂದ ಈ ಅಭಿಯಾನ ವಿಶ್ವವ್ಯಾಪಿ ಗಮನ ಸೆಳೆಯಲು ಕಾರಣವಾಗಿದೆ. ಈ ಬಾರಿಯ ಹೆರಿಟೇಜ್ ರನ್ ನಲ್ಲಿ ನಾನೂ ಕೂಡ 10 ಕಿ. ಮೀ. ಓಟದಲ್ಲಿ ಪಾಲ್ಗೊಳ್ಳುತ್ತೇನೆ. ಅಲ್ಲದೇ, ಸಮಾನ ಮನಸ್ಕ ಓಟಗಾರ ಸ್ನೇಹಿತರನ್ನು ಪಾಲ್ಗೋಳ್ಳಲು ಆಹ್ವಾನಿಸುತ್ತೇನೆ ಎಂದು ಹೇಳಿದರು.
*ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2025 ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ರಾಜ್ಯ ಇ- ಆಡಳಿತ ಇಲಾಖೆಯ ನಾಗರಿಕರಿಗೆ ವಿದ್ಯುನ್ಮಾನ ಸೇವೆ ಪೂರೈಕೆ ನಿರ್ದೇಶಕ(Electronic Delivery Of Citizen Services) ಟಿ. ಭೂಬಾಲನ್ ಅವರಿಗೆ ಬೆಂಗಳೂರಿನಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2025ರ ರಾಯಭಾರಿ ಮತ್ತು ಭಾರತೀಯ ರೇಲ್ವೆಯ ಹಿರಿಯ ಅಧಿಕಾರಿ ಪ್ರವೀಣ ಕಾತರಕಿ ಮತ್ತು ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಅವರು ಆಹ್ವಾನ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande