ಬಳ್ಳಾರಿ, 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 158ನೆಯ ಹಾಗೂ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರ 87ನೇ ಜಯಂತ್ಯೋತ್ಸವು ಸೆಪ್ಟಂಬರ್ 13 ಮತ್ತು 14 ರಂದು ನಡೆಯಲಿವೆ.
ಶ್ರೀ ಮಠವು ನೀಡಿರುವ ಮಾಹಿತಿ, ಸೆಪ್ಟಂಬರ್ 13ರ ಶನಿವಾರ ಸಂಜೆ 4 ಗಂಟೆಗೆ ಸೋಮಸಮುದ್ರ ಗ್ರಾಮದಲ್ಲಿ ಪ್ರಾರಂಭವಾಗುವ ಪಾದಯಾತ್ರೆಯು ಶ್ರೀಧರಗಡ್ಡೆ ಗ್ರಾಮವನ್ನು ತಲುಪಿ, ಶ್ರೀಕನಕ ದುರ್ಗಮ್ಮ ಗುಡಿಯ ಮೂಲಕ ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ಮೂಲಕ ಶ್ರೀಮಠದಲ್ಲಿ ಸಮಾರೋಪಗೊಳ್ಳಲಿದೆ. ಅಲ್ಲದೇ, ಸಂಜೆ 7 ಗಂಟೆಗೆ ಕೊಟ್ಟೂರೇಶ್ವರರ ರಥೋತ್ಸವವು ನೆರವೇರುವುದು.
ಸಂಜೆ 7 ಗಂಟೆಗೆ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ `ಜೀವನ ದರ್ಶನ’ ಪ್ರವಚನ ಮಂಗಲೋತ್ಸವ. ಬಾಗಲಕೋಟೆಯ ಉಮಾಪತಿ ಶಾಸ್ತ್ರಿಗಳು ರಚಿಸಿರುವ `ಹಂಪೆ ಹೇಮಕೂಟ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಕೊಟ್ಟೂರಸ್ವಾಮಿ ಗುರುಪರಂಪರೆ’ ಗ್ರಂಥ ಲೋಕಾರ್ಪಣೆ ನಡೆಯಲಿದೆ.
ಸೆಪ್ಟಂಬರ್ 14ರ ಭಾನುವಾರ ಬೆಳಗ್ಗೆ 10 ಗಂಟೆಗೆ 1111 ಮುತ್ತೈದೆಯರಿಗೆ ಉಡಿ ತುಂಬುವಿಕೆ ಹಾಗೂ ಪೂಜ್ಯದ್ವಯರ ಭಾವಚಿತ್ರದ ಮಹೋತ್ಸವ ನೆರವೇರಲಿದೆ. ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಮತ್ತು ಸಾಧನೆಗಳನ್ನು ಮಾಡಿರುವವರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠ ತಿಳಿಸಿದೆ.
ಎರೆಡು ದಿನಗಳ ಕಾರ್ಯಕ್ರಮಗಳಲ್ಲಿ ಬಳ್ಳಾರಿ, ಶ್ರೀಧರಗಡ್ಡೆ, ಶಿರಿವಾರ, ಸೋಮಸಮುದ್ರ, ಮದಿರೆ, ಕುರುಗೋಡು, ದರೂರು, ಸಿರಿಗೇರಿ ಹಾಗೂ ಸುತ್ತಲಿನ ಗ್ರಾಮಗಳ ಗುರು – ಹಿರಿಯರು, ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್