ಹೊಸಪೇಟೆ , 10 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಚೀಪ್ ರಿಜಿನಲ್ ಮ್ಯಾನೇಜರ್ (ಮಂಗಳೂರು ರಿಜೀನ್), ಮಾಂಗಾ ರಿಫೈನರಿ & ಪೆಟ್ರೋಕೆಮಿಕಲ್ಸ್ ಮಂಗಳೂರು ಲಿಮಿಟೆಡ್ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಗಿ ಹೋಬಳಿಯ ತೆಲಗಿ ಗ್ರಾಮದ ಸ.ನಂ.115/1 ಜಮೀನಿನಲ್ಲಿ 32 ಕೆಎಲ್ ಸಾಮಥ್ರ್ಯದ ಪೆಟ್ರೋಲಿಯಂ ಕ್ಲಾಸ್ ಎ ಮತ್ತು 22 ಕೆಎಲ್ ಸಾಮಥ್ರ್ಯದ ಪೆಟ್ರೋಲಿಯಂ ಕ್ಲಾಸ್ ಬಿ, ಒಟ್ಟು 54 ಕೆಎಲ್ ಸಾಮರ್ಥ್ಯದ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಸ್ಥಾಪನೆ ಮಾಡಲು ನಿರಾಪೇಕ್ಷಣ ಪ್ರಮಾಣ ಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿರುತ್ತಾರೆ.
ರಾಘವೇಂದ್ರ ನಾಯ್ಕ್ ತಂದೆ ದೇವೇಂದ್ರ ನಾಯ್ಕ್, ವಾಸ ಲಕ್ಷ್ಮೀಪುರ ತಾಂಡ, ಸಾತೂರ್ ಅಂಚೆ, ಹರಪನಹಳ್ಳಿ ತಾಲೂಕು ಇವರನ್ನು ಪ್ರಾಂಚೈಸಿಯನ್ನಾಗಿ ನೇಮಕ ಮಾಡಿದ್ದು, ಈ ಜಮೀನಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್ ಸ್ಥಾಪನೆ ಮಾಡಲು ನಿರಾಪೇಕ್ಷಣ ಪ್ರಮಾಣ ಪತ್ರ ನೀಡಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಹತ್ತು ದಿನದೊಳಗಾಗಿ ಯಾವುದೇ ಅಕ್ಷೇಪಣೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಇಮೇಲ್ ಐಡಿ : ಅಥವಾ ಕಾರ್ಯಾಲಯದ ಎಂಎಜಿ-2 ಶಾಖೆಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್