ಧರ್ಮಸ್ಥಳ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬಿಜೆಪಿ ವತಿಯಿಂದ ಧರ್ಮಸ್ಥಳದಲ್ಲಿ ನಡೆದ ಧರ್ಮಸ್ಥಳ ಚಲೋ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಬುರುಡೆ ಪ್ರಕರಣದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರನ್ನು ಬುರುಡೆ ಸಿದ್ದರಾಮಯ್ಯ ಎಂದು ಉಲ್ಲೇಖಿಸಿ, ಧರ್ಮಯುದ್ಧಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ. ಎಸ್‌ಐಟಿ ತನಿಖೆಗೆ ಸ್ವಾಗತ ಇದೆ, ಆದರೆ ಇದು ಸಾಕಾಗುವುದಿಲ್ಲ. ತಮಿಳುನಾಡು, ಕೇರಳ, ದೆಹಲಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸಂಪರ್ಕ ಈ ಪ್ರಕರಣಕ್ಕೆ ಇದೆ. ಆದ್ದರಿಂದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು, ಇಲ್ಲದಿದ್ದರೆ ನ್ಯಾಯ ಸಿಗುವುದಿಲ್ಲ ಎಂದು ಆಗ್ರಹಿಸಿದರು.
,ಸಿದ್ದರಾಮಯ್ಯ ಅವರಿಗೆ ಧೈರ್ಯವಿದ್ದರೆ ಚಾಮುಂಡೇಶ್ವರಿ ದೇವಸ್ಥಾನ ಹಿಂದುಗಳ ದೇವಾಲಯವಲ್ಲ ಅಂತ ಹೇಳಿ ಎಂದು ಸವಾಲು ಹಾಕಿದರು.
ಧರ್ಮಸ್ಥಳದಲ್ಲಿ ಬುರುಡೆ ಹುಡುಕುತ್ತಿದಿರಿ, ಧೈರ್ಯ ಇದ್ದರೆ ಮಸೀದಿಗಳಲ್ಲಿ ಹುಡುಕಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಬುರುಡೆ ಕಥೆಯ ನಿರ್ದೇಶಕ ಯಾರೇ ಇದ್ದರು, ನಿರ್ಮಾಪಕರು ಮಾತ್ರ ಕಾಂಗ್ರೆಸ್ ಎಂದು ಅಶೋಕ್ ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa