ಸೆ.24 ರಂದು ನಿರುಪಯುಕ್ತ ವಾಹನ ಬಹಿರಂಗ ಹರಾಜು
ಬಳ್ಳಾರಿ, 01 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಗುಣ ನಿಯಂತ್ರಣ ವಿಭಾಗ ಧಾರವಾಡಕ್ಕೆ ಸೇರಿದ ಸಂಪೂರ್ಣ ನಿರುಪಯುಕ್ತ (ಟಾಟಾ ಸುಮೋ ಜೀಪ್) ವಾಹನವನ್ನು ಸೆ.24 ರಂದು ಮಧ್ಯಾಹ್ನ 01 ಗಂಟೆಗೆ ನಗರದ ಕೋಟೆ ಪ್ರದೇಶದ ಪಿ.ಡಬ್ಲೂ.ಡಿ ಕಾಂಪೌಂಡ್ ನ ಸಣ್ಣ
ಸೆ.24 ರಂದು ನಿರುಪಯುಕ್ತ ವಾಹನ ಬಹಿರಂಗ ಹರಾಜು


ಬಳ್ಳಾರಿ, 01 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಗುಣ ನಿಯಂತ್ರಣ ವಿಭಾಗ ಧಾರವಾಡಕ್ಕೆ ಸೇರಿದ ಸಂಪೂರ್ಣ ನಿರುಪಯುಕ್ತ (ಟಾಟಾ ಸುಮೋ ಜೀಪ್) ವಾಹನವನ್ನು ಸೆ.24 ರಂದು ಮಧ್ಯಾಹ್ನ 01 ಗಂಟೆಗೆ ನಗರದ ಕೋಟೆ ಪ್ರದೇಶದ ಪಿ.ಡಬ್ಲೂ.ಡಿ ಕಾಂಪೌಂಡ್ ನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಗುಣ ನಿಯಂತ್ರಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುತ್ತದೆ ಎಂದು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಅಸಕ್ತಿಯುಳ್ಳವರು ತುಂಬಿದ ಮೊಹರ್ ಬಂದ್ ಲಕೋಟೆಯನ್ನು ಸೆ.18 ರಿಂದ ಸೆ.23 ರೊಳಗಾಗಿ ಬಳ್ಳಾರಿ ಕಚೇರಿಗೆ ಸಲ್ಲಿಸಬೇಕು.

ಇಎಮ್‍ಡಿ ಮೊತ್ತ ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರದ ಕೋಟೆ ಪ್ರದೇಶದ ಪಿ.ಡಬ್ಲೂ.ಡಿ ಕಾಂಪೌಂಡ್ ನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಗುಣ ನಿಯಂತ್ರಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande