ಹುಬ್ಬಳ್ಳಿ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸೋಮವಾರದ ರಾಶಿ ಫಲ
*01,ಮೇಷರಾಶಿ*
ಶತ್ರುಗಳು ನಿಮ್ಮ ಯೋಜನೆ ತಿಳಿಯಲು ಪ್ರಯತ್ನಿಸುವರು. ಹಾಗಾಗಿ ನೀವು ನಿಮ್ಮ ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವನ್ನು ತಂದುಕೊಳ್ಳದಿರಿ. ಮತ್ತು ಮನೆಯ ಗುಟ್ಟನ್ನು ಹೊರಗೆ ಹಾಕದಿರಿ. ಕೆಲಸ ಮಾಡುವಾಗ ಗಾಯಗೊಳ್ಳುವ ಸಂಭವವಿದೆ. ಹಣ ಕಾಸಿನ ವಿಷಯದಲ್ಲಿ ಜಾಗ್ರತೆ ಅವಶ್ಯ.
ರುದ್ರದೇವರನ್ನು ಮನಸಾ ಪೂಜಿಸಿ.
*02, ವೃಷಭರಾಶಿ*
ಮನಸ್ಸನ್ನು ಗೊಂದಲ ಮಾಡಿಕೊಂಡು ಕಾರ್ಯ ಪ್ರವೃತ್ತರಾದಲ್ಲಿ ಯಶಸ್ಸು ದೊರೆಯುವುದು ನಿಧಾನವಾಗುವುದು. ಚಿಕ್ಕ ವಿಷಯಗಳಿಗೆ ಮನೆಯಲ್ಲೇ ಮನಸ್ತಾಪ ಭುಗಿಲೇಳುವ ಸಾಧ್ಯತೆ ಇದೆ. ಆಹಾರ ಸೇವನೆಯ ಕಡೆಗೆ ವಿಶೇಷ ಗಮನ ಅಗತ್ಯ, ಅಜಾಗರೂಕತೆಯಿಂದ ನಿಮ್ಮ ಅರೋಗ್ಯ ಕೆಡಬಹುದು.
ಕುಲದೇವರ ದರ್ಶನ ಮಾಡಿ.
*03,ಮಿಥುನ ರಾಶಿ*
ಮಕ್ಕಳ ವಿಚಾರಧಾರೆಗಳು ನಿಮ್ಮ ಮನಸಿಗೆ ಘಾಸಿ ಮಾಡುವ ಸಂಭವವಿದೆ. ಅವರಿಗೆ ಗುರು ಹಿರಿಯರ ಮೂಲಕ ಬುದ್ಧಿಮಾತನ್ನು ಹೇಳಿಸಿ. ಸಾಲ, ಆರ್ಥಿಕ ಬಂಡವಾಳ ಹೂಡಿಕೆ ಮತ್ತು ಖರೀದಿ/ ಮಾರಾಟ ವ್ಯವಹಾರಗಳನ್ನು ಈ ದಿನ ಮಾಡದಿರಿ. ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ
ಸಾಧ್ಯವಾದರೆ ಶಿವಾಲಯದಲ್ಲಿ ರುದ್ರಾಭಿಷೇಕ ಮಾಡಿಸಿ.
*04,ಕಟಕ ರಾಶಿ*
ಕಾರಣವಿಲ್ಲದೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುವ ಸಂಭವವಿದೆ. ಆದರೆ ಅವರನ್ನು ನಿಗ್ರಹಿಸುವುದು ನಿಮ್ಮ ಕೈಯಲ್ಲಿಲ್ಲ ಎನ್ನುವ ಸತ್ಯವನ್ನು ಅರಿಯುವಿರಿ. ನಿಮಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದು ದೊಡ್ಡ ಸಮಸ್ಯೆಯಾಗಿ ಈ ದಿನ ಕಾಡಬಹುದು. ಈ ದಿನ ಶುಭ ವಾರ್ತೆಯೊಂದನ್ನು ಕೇಳುವಿರಿ.
ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ.
*05,ಸಿಂಹ ರಾಶಿ* ಗ್ರಹಗತಿಗಳು ವಿಮುಖವಾಗಿರುವಾಗ ಸಣ್ಣ ಕೆಲಸವು ದೀರ್ಘಾವಧಿಯನ್ನು ತೆಗೆದುಕೊಳ್ಳುವುದು. ಇದಕ್ಕಾಗಿ ಆತಂಕ ಪಡದೆ ಕೆಲಸ ಆಗುವವರೆಗೂ ತಾಳ್ಮೆಯಿಂದ ಇರುವುದು ಒಳ್ಳೆಯದು. ಈ ದಿನ ಒಂದು ಅನಿರೀಕ್ಷಿತ ಸಂತೋಷಕರ ಘಟನೆ ನಿಮ್ಮ ಜೀವನದಲ್ಲಿ ನಡೆಯಬಹುದು.
ಗುರು ಮತ್ತು ಶನಿಯ ಸ್ತೋತ್ರ ಪಠಿಸಿ.
*06,ಕನ್ಯಾ ರಾಶಿ*
ನಿಮಗೆ ಒದಗಿದ ಅನೇಕ ಬಿಕ್ಕಟ್ಟುಗಳು ದೈವಕೃಪೆಯಿಂದ ಸಡಿಲಗೊಳ್ಳುವುವು. ಮತ್ತು ನಿಮ್ಮ ಬಹುದಿನದ ಬಯಕೆಗಳು ಗರಿಕೆದರಿ ಕುಣಿದಾಡುವುವು. ಸದ್ಯದರಲ್ಲೇ ಇನ್ನು ಹೆಚ್ಚು ಸಂತಸ ನೀಡುವ ವಾರ್ತೆಯನ್ನು ಕೇಳುವಿರಿ, ನಿಮ್ಮ ಸಕಾರಾತ್ಮಕ ಮನಸ್ಸಿನ ಜೊತೆ ನಿಮ್ಮ ಸಾಮರ್ಥ್ಯ ಹಾಗು ಜ್ಞಾನವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿ ಕೊಂಡಲ್ಲಿ ಸಫಲತೆ ನಿಮ್ಮದಾಗುವುದು.
ಗಣಪತಿಯ ಪ್ರಾರ್ಥನೆ ಮಾಡಿ.
*07,ತುಲಾ ರಾಶಿ*
ಯಾವುದೂ ನಿಮಗೆ ಕಷ್ಟವಲ್ಲ. ಆದರೆ ಯಾಕೋ ತಿಳಿದಷ್ಟು ವೇಗದಿಂದ ಮುಂದೆ ಸಾಗಲಾರದು ಎಂಬ ತಳಮಳ ನಿಮ್ಮನ್ನು ಬಾಧಿಸುವುದು. ಆದರೆ ಪೂರ್ವ ತಯಾರಿ ಸೂಕ್ತವಾಗಿ ಮಾಡಿಕೊಂಡಲ್ಲಿ ನಿಶ್ಚಿತವಾದ ಗುರಿಯನ್ನು ತಲುಪುವಿರಿ. ಆದಾಯ ಖರ್ಚನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಕೆಲವು ಘಟನೆಗಳು ನಿಮ್ಮನ್ನಿಂದು ಭಾವಪರವಶರನ್ನಾಗಿಸುವವು.
ಸಂಜೆ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬನ್ನಿ.
*08,ವೃಶ್ಚಿಕ ರಾಶಿ*
ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವವು. ತೀರ್ಪು ಕೂಡಾ ನಿಮ್ಮ ಪರವಾಗಿ ಬರುವುದರಿಂದ ಮನಸ್ಸಿಗೆ ಸಂತಸವಾಗುವುದು. ಇದರಿಂದ ಒಳಿತನ್ನು ಕಾಣುವಿರಿ. ಪ್ರಯಾಣದಲ್ಲಿ ಎಚ್ಚರ ಇರಲಿ. ಹಣ್ಣು, ಐಸ್ ಕ್ರೀಮ್, ಹೂವು, ನೀರಿಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ಇಂದು ವಿಶೇಷ ಲಾಭವಾಗುವುದು.
ಬಡವರಿಗೆ ಆಹಾರ ನೀಡಿ
*09,ಧನಸ್ಸು ರಾಶಿ*
ಅವಸರದ ಕೆಲಸಗಳು ಅವ್ಯವಸ್ಥೆಯನ್ನು ಉಂಟು ಮಾಡುವುದು. ಯಾವಾಗಲೂ ಕ್ರಮಬದ್ಧವಾಗಿ ಯೋಚಿಸುವ ನೀವು ಇಂದೇಕೋ ತಾಳ್ಮೆಯನ್ನು ಕಳೆದು ಕೊಳ್ಳುವಿರಿ. ತಂದೆಯವರಿಗೆ ಅಗತ್ಯವಿದ್ದಲ್ಲಿ ಸಹಾಯ ಮಾಡಿ, ನಿಮ್ಮ ಕೈಕೆಳಗೆ ಕೆಲಸ ಮಾಡುವವರು ಇಂದು ನಿಮ್ಮ ಆಜ್ಞೆಯನ್ನು ತಿರಸ್ಕರಿಸಬಹುದ.
ಮಾರುತಿ ದೇವರನ್ನು ಆರಾಧಿಸಿ.
*10,ಮಕರ ರಾಶಿ*
ಎಷ್ಟೆಲ್ಲಾ ಕನಸುಗಳನ್ನು ಕಾಣುವಿರಿ. ಆದರೆ ನನಸಾಗುವ ಘಟ್ಟ ತಲುಪಿದಾಗ ನಿಮಗೆ ನಿರಾಶೆ ಕಾಣುವುದು. ನಿಮಗೆ ಅನುಭವ ಇರುವ ಕೆಲಸವನ್ನು ಹುಡುಕಿ ಮಾಡಿದಲ್ಲಿ ಯಶಸ್ಸನ್ನು ಹೊಂದಲು ಸಹಕಾರಿಯಾಗುವುದು. ಗಟ್ಟಿಯಾದ ಮನೋಸ್ಥಿತಿ ರೂಪಿಸಿಕೊಳ್ಳಿ., ಖರೀದಿ/ಮಾರಾಟ ಮತ್ತು ಸಾಲಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳುವಾಗ ಜಾಗೂರುಕರಾಗಿರಿ.
ನಿಮ್ಮ ಮನೆದೇವರ ಸ್ಮರಣೆ ಮಾಡಿ.
*11,ಕುಂಭ ರಾಶಿ*
ಕೆಲವು ಅಪರೂಪದ ಶಕ್ತಿ, ಸಾಹಸ, ಪ್ರತಿಭೆಗಳನ್ನು ನೀವು ಹೊಂದಿರುವುದರಿಂದ ಅವೆಲ್ಲವೂ ನಿಮ್ಮ ಉಪಯೋಗಕ್ಕೆ ಬರುತ್ತವೆ, ಇದರಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗುವಿರಿ. ಮನಸ್ತಾಪ ಮತ್ತು ಜಗಳಗಳಿಗೆ ಈ ದಿನ ಅವಕಾಶ ಕೊಡದಿರಿ, ನಿಮ್ಮ ಮೇಲೆ ಸುಳ್ಳು ಆಪಾದನೆಗಳು ಬರುವ ಸಾಧ್ಯತೆ ಇದೆ, ಆಹಾರ ಸೇವನಾ ಕ್ರಮದತ್ತ ಜಾಗೂರುಕತೆ ವಹಿಸಿ.
ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ.
*12,ಮೀನ ರಾಶಿ* ಶ್ರಮಪಟ್ಟರೆ ಕೆಲವು ಸಿದ್ಧಿಗಳನ್ನು ಸಂಪಾದಿಸಿಕೊಳ್ಳಲು ಈಗ ನಿಮಗೆ ದೈವಾನುಕೂಲವಿದೆ. ನಿಮ್ಮ ಮಾತುಗಳನ್ನು ನಿಯಂತ್ರಿಸಿಕೊಳ್ಳಿ. ಸಂಕಲ್ಪಿತ ಗುರಿ ಈಡೇರಿಸಿಕೊಳ್ಳುವವರೆಗೂ ನಿಮ್ಮ ಯೋಜನೆಗಳನ್ನು ಅನ್ಯರ ಬಳಿಯಲ್ಲಿ ಬಹಿರಂಗಗೊಳಿಸದಿರಿ. ಬಂಧು ಮಿತ್ರರೊಂದಿಗೆ ಈ ದಿನ ನಿಮ್ಮ ಸಂಬಂಧವೂ ಉತ್ತಮಗೊಳ್ಳುವುದು.
ಶಿವಪಂಚಾಕ್ಷರಿ ಮಂತ್ರ ಜಪಿಸಿ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa