ರಾಯಚೂರು, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಾಧ್ಯಮ ರಂಗಕ್ಕೆ ಬದುದೊಡ್ಡ ಶಕ್ತಿ ಇದೆ. ಆದ್ದರಿಂದ ಪತ್ರಕರ್ತರು ತಮ್ಮ ಜೊತೆಗಿರಬೇಕು ಎಂದು ಬಯಸುತ್ತೇನೆ. ಪತ್ರಕರ್ತರ ಸಹಕಾರವು ಸಿಕ್ಕರೆ, ಯಾರೇ ಇರಲಿ ಭ್ರಷ್ಟರನ್ನು ಮಟ್ಟ ಹಾಕುತ್ತೇನೆ ಎಂದು ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ತಿಳಿಸಿದರು.
ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಲಂಚದ ಅನ್ನ, ಬೇರೆಯವರ ಅನ್ನ ತಿಂದರೆ ಅದು ವಿಷತಿದ್ದಂತೆ ಎಂದು, ಪ್ರವಾಸಕ್ಕೆ ಹೋದ ಎಲ್ಲ ಕಡೆಗಳಲ್ಲಿ ನಾನು ಹೇಳುತ್ತೇನೆ. ನ್ಯಾಯಪಾಲನೆಯೇ ನನ್ನ ಗುರಿ ಎಂದು ತಿಳಿಸುತ್ತೇನೆ. ನನ್ನ ಜೊತೆಗೆ ಪತ್ರಕರ್ತರು ಬಂದರೆ, ಪತ್ರಕರ್ತರ ಸಹಕಾರ ಸಿಕ್ಕರೆ ಭ್ರಷ್ಟರ ಬಂಡವಾಳವನ್ನು ಬಯಲು ಮಾಡುತ್ತೇನೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಕರ್ತರು ಸಹ ಹೋರಾಟದಲ್ಲಿ ಭಾಗಿಯಾದರು. ಮಹಾತ್ಮ ಗಾಂಧೀಜಿಯವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಹ ಪತ್ರಕರ್ತರು ಆಗಿದ್ದರು. ನನಗೆ ಪತ್ರಕರ್ತರು, ಪತ್ರಿಕಾರಂಗ, ಮಾಧ್ಯಮ ರಂಗದ ಬಗ್ಗೆ ಅಪಾರ ಅಭಿಮಾನವಿದೆ. ನಾನು ಹೋದ ಎಲ್ಲ ಕಡೆಗಳಲ್ಲಿ, ಪತ್ರಿಕಾರಂಗ ಮತ್ತು ನ್ಯಾಯಂಗವನ್ನು ಬಲಪಡಿಸಬೇಕು ಎಂದು ಸಲಹೆ ಮಾಡುತ್ತೇನೆ ಎಂದು ಉಪ ಲೋಕಾಯುಕ್ತರಾದ ಬಿ ವೀರಪ್ಪ ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್