ಬಳ್ಳಾರಿ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸಂಡೂರು ತಾಲ್ಲೂಕಿನ ವೆಂಕಟಗಿರಿ ಗ್ರಾಮದ ರಾಮದುರ್ಗ(ರಾಮಗಢ) ಬ್ಲಾಕ್‍ನ ರಾಮಗಢ ಸಂರಕ್ಷಿತ ಅರಣ್ಯದ ಗಣಿಗುತ್ತಿಗೆ ಸಂಖ್ಯೆ.2451 ರಲ್ಲಿ ಮೆ.ಉದಯಶಿವಕುಮಾರ್ ಇನ್‍ಪ್ರಾ ಪ್ರೈವೇಟ್ ಲಿಮಿಟೆಡ್ ಇವರು ‘ಸಚ್ಚಿದಾನಂದ ಕಬ್ಬಿಣ ಅದಿರು ಗಣಿ’ಯ ಒಟ್ಟು 24.04 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 93,975 ಟನ್ ಉತ್ಪಾದನಾ ಸಾಮಥ್ರ್ಯದ ಉದ್ದೇಶಿತ ಕಬ್ಬಿಣದ ಅದಿರು ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದು, ಇದರ ಕುರಿತು ಸೆ.29 ರಂದು ಬೆಳಿಗ್ಗೆ 11 ಗಂಟೆಗೆ ಸಂಡೂರು ತಾಲ್ಲೂಕಿನ ವೆಂಕಟಗಿರಿ ಗ್ರಾಮದ ರಾಮದುರ್ಗ(ರಾಮಗಢ) ಬ್ಲಾಕ್‍ನ ರಾಮಗಢ ಸಂರಕ್ಷಿತ ಅರಣ್ಯದ ಗಣಿಗುತ್ತಿಗೆ ಸಂಖ್ಯೆ 2451 ಇಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧ್ಯಕ್ಷತೆ ವಹಿಸುವರು.
ಇದಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಯೋಜನೆಯ ಕಾರ್ಯ ನಿರ್ವಾಹಕ ಸಾರಾಂಶ ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಸಂಬಂಧಿಸಿದ ಕಚೇರಿಗಳಲ್ಲಿ ಸಾರಾಂಶ ಪ್ರತಿಯನ್ನು ಸಾರ್ವಜನಿಕರ ಗಮನಕ್ಕೆ ಇಡಲಾಗಿದೆ.
ಸುತ್ತಮುತ್ತಲಿನ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ, ಅಹವಾಲು ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್