ಮೈಸೂರು, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಅಗ್ರಹಾರದಲ್ಲಿರುವ ಪ್ರಸಿದ್ಧ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿ ಉಪಹಾರ ಸೇವಿಸಿದರು.
ಮೈಲಾರಿ ಹೋಟೆಲ್‌ನ ದೋಸೆ ಹಾಗೂ ಇಡ್ಲಿಯನ್ನು ಮುಖ್ಯಮಂತ್ರಿ ಸವಿದರು. ಈ ವೇಳೆ ಅವರೊಂದಿಗೆ ಸಚಿವ ಕೆ. ವೆಂಕಟೇಶ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಐಜಿಪಿ ಬೋರಲಿಂಗಯ್ಯ ಮತ್ತು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಅವರಿಗೆ ಮೈಲಾರಿ ಹೋಟೆಲ್‌ನ ದೋಸೆ ಅಚ್ಚುಮೆಚ್ಚು. ಅವರು ಮೈಸೂರಿಗೆ ಭೇಟಿ ನೀಡಿದಾಗ ಸಾಮಾನ್ಯವಾಗಿ ಈ ಹೋಟೆಲ್‌ಗೆ ಬಂದು ದೋಸೆ ಸವಿಯುವ ಅಭ್ಯಾಸವನ್ನು ಮುಂದುವರೆಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa