ರಾಜಕೀಯ ಲಾಭಕ್ಕಾಗಿ ಬಿಜೆಪಿ ಯಾತ್ರೆ : ಸಿದ್ದರಾಮಯ್ಯ
ಮೈಸೂರು, 01 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಬಿಜೆಪಿ ನಡೆಸುತ್ತಿರುವ ಧರ್ಮಸ್ಥಳ ಹಾಗೂ ಚಾಮುಂಡಿ ಚಲೋ ಯಾತ್ರೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಯಾತ್ರೆ ಮಾಡುತ್ತಿದೆ. ಆದರೆ ಇದರಿಂದ ಅವರಿಗೆ ಏನೂ ಪ್ರಯೋಜನ ಆಗುವುದಿಲ್ಲ. ಎಸ್‌ಐಟ
Cm


ಮೈಸೂರು, 01 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಿಜೆಪಿ ನಡೆಸುತ್ತಿರುವ ಧರ್ಮಸ್ಥಳ ಹಾಗೂ ಚಾಮುಂಡಿ ಚಲೋ ಯಾತ್ರೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜಕೀಯ ಲಾಭಕ್ಕಾಗಿ ಯಾತ್ರೆ ಮಾಡುತ್ತಿದೆ. ಆದರೆ ಇದರಿಂದ ಅವರಿಗೆ ಏನೂ ಪ್ರಯೋಜನ ಆಗುವುದಿಲ್ಲ. ಎಸ್‌ಐಟಿ ರಚನೆಯಾದಾಗ ಯಾತ್ರೆ ಮಾಡಲಿಲ್ಲ, ಇದು ಡೋಂಗಿತನ ಎಂದು ಹರಿಹಾಯ್ದಿದ್ದಾರೆ.

ಮೈಸೂರಿನ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂತ್ವ ಗಟ್ಟಿಯಾಗುತ್ತೆ ಎಂದು ಬಿಜೆಪಿ ಈ ಯಾತ್ರೆಗಳನ್ನು ಪ್ಲಾನ್ ಮಾಡುತ್ತಿದೆ. ಆದರೆ ಹೀಗೆ ಮಾಡಿದರೆ ಹಿಂದೂತ್ವ ಗಟ್ಟಿಯಾಗೋದಿಲ್ಲ. ನಾನು ಕೂಡ ಹಿಂದೂ, ನಾವೆಲ್ಲರೂ ಹಿಂದೂ. ನಾನು ನಮ್ಮ ಊರಲ್ಲಿ ರಾಮಮಂದಿರ ಕಟ್ಟಿಸಿದ್ದೇನೆ. ಹಿಂದೂಗಳು ಎಂದರೆ ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದು ಅಲ್ಲ, ಮನುಷ್ಯತ್ವ ಉಳಿಸುವವರು ಹಿಂದೂಗಳು. ಅಮಾನವೀಯ ನಡವಳಿಕೆ ತೋರುವವರು ಹಿಂದೂಗಳಲ್ಲ ಎಂದರು.

ಬಿಜೆಪಿ ದಸರಾ ಹಬ್ಬಕ್ಕೂ ರಾಜಕೀಯ ಬಣ್ಣ ಹಚ್ಚಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಅವರು ಬೇಕಾದರೆ ತಮ್ಮ ಮನೆಗೂ ರಾಜಕೀಯ ಬಣ್ಣ ಹಚ್ಚುತ್ತಾರೆ. ಸುಳ್ಳು ಹೇಳುವುದರ ಹೊರತು ಅವರಿಗೆ ಇನ್ನೇನು ಗೊತ್ತು? ಅವರ ಹೋರಾಟದಿಂದ ದಸರಾ ಹಬ್ಬದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಲ್ಲ. ಹಿಂದೂಗಳೆಲ್ಲ ಬಿಜೆಪಿ ಜೊತೆ ಇಲ್ಲ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಇರಬಹುದು. ಆದರೆ ಪ್ರಸ್ತುತ ಚರ್ಚೆ ದಸರಾ ಬಗ್ಗೆ ಮಾತ್ರ. ದಸರಾ ನಾಡಹಬ್ಬ, ಅದು ಎಲ್ಲರಿಗೂ ಸೇರಿದ್ದು. ಡಿ.ಕೆ. ಶಿವಕುಮಾರ್ ಏನು ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande