ಅಂಗನವಾಡಿ : 2ನೇ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ ಆಹ್ವಾನ
ರಾಯಚೂರು, 01 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ರಾಯಚೂರು ತಾಲೂಕು ಶಿಶು ಅಭಿವೃದ್ಧಿ ಯೋಜನೆಯಡಿ ಗಿಲ್ಲೇಸೂಗೂರು ವ್ಯಾಪ್ತಿಯಲ್ಲಿ 2024-25ನೇ ಸಾಲಿಗೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‍ಲೈನ್ ಮುಖಾಂತರ
ಅಂಗನವಾಡಿ : 2ನೇ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ ಆಹ್ವಾನ


ರಾಯಚೂರು, 01 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ರಾಯಚೂರು ತಾಲೂಕು ಶಿಶು ಅಭಿವೃದ್ಧಿ ಯೋಜನೆಯಡಿ ಗಿಲ್ಲೇಸೂಗೂರು ವ್ಯಾಪ್ತಿಯಲ್ಲಿ 2024-25ನೇ ಸಾಲಿಗೆ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರಂತೆ ಈ ಹುದ್ದೆಗಳಿಗೆ ಜಿಲ್ಲಾ ಆಯ್ಕೆ ಸಮಿತಿಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ದಿನಾಂಕ 13.02.2025ರಂದು ಸಭೆ ನಡೆಸಿ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ.

ಅದರಲ್ಲಿ ಕೆಲವು ಅಂಗನವಾಡಿ ಕೇಂದ್ರಗಳಿಗೆ ಎರಡು ಕಡೆ ಒಬ್ಬರೆ ಅಭ್ಯರ್ಥಿಯು ಆಯ್ಕೆಯಾಗಿದ್ದು, ಅವರು ಕೋರಿರುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಜಿಲ್ಲಾ ಸಮಿತಿಯಿಂದ ತೀರ್ಮಾನಿಸಲಾಗಿದೆ ಮತ್ತು ಅವಕಾಶ ನೀಡಲಾಗಿರುತ್ತದೆ. ಅದರಂತೆ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇನ್ನೊಂದು ಕೇಂದ್ರಕ್ಕೆ 2ನೇ ಆದ್ಯತೆ ಇರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ಮ್ನ ಪ್ರಕಟಿಸಿದ್ದು, ಇದಕ್ಕೆ ಆಕ್ಷೇಪಣೆ ಅರ್ಜಿಗಳನ್ಮ್ನ ಸೂಕ್ತ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 03ರ ಸಂಜೆ 5.30ರವರೆಗೆ ಸಲ್ಲಿಸಬಹುದಾಗಿದೆ ಎಂದು ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ಗಿಲ್ಲೇಸೂಗೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಕ್ಷೇಪಣೆ ಸಲ್ಲಿಸುವವರು ಆಕ್ಷೇಪಣೆ ಅರ್ಜಿಯ ಜೊತೆಗೆ ಯಾವುದೇ ದಾಖಲಾತಿಗಳನ್ಮ್ನ ಸಲ್ಲಿಸದಿದ್ದಲ್ಲಿ ಅಂತಹವರ ಆಕ್ಷೇಪಣೆ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

2ನೇ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳು: ಕಾಡ್ಲೂರ ಕೇಂದ್ರ-2ಕ್ಕೆ ಪರ್ವಿನ್ ಗಂಡ ದೌಲಸಾಬ್, ಎಲ್.ಕೆ.ದೊಡ್ಡಿ ಅಂಗನವಾಡಿ ಕೇಂದ್ರ-3ಕ್ಕೆ ರಮೇಶಮ್ಮ ಗಂಡ ಮಹೇಶ, ಸುಗಮಕುಂಟ ಗ್ರಾಪಂ ವ್ಯಾಪ್ತಿಯ ಇಬ್ರಾಹಿಂದೊಡ್ಡಿ ಅಂಗನವಾಡಿ ಕೇಂದ್ರ-3ಕ್ಕೆ ಜಯಶ್ರೀ ಗಂಡ ನರಸಿಂಹಲು, ಬಿಜನಗೇರಾ ಅಂಗನವಾಡಿ ಕೇಂದ್ರ-3ಕ್ಕೆ ವನೀತಾ ಗಂಡ ಜಂಬಣ್ಣ, ಚಂದ್ರಬಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಲೇಟ್ಕೂರು ಅಂಗನವಾಡಿ ಕೇಂದ್ರ-3ಕ್ಕೆ ಮಹಾದೇವಿ ಗಂಡ ಮಾರೆಪ್ಪ, ಗಾಣದಾಳ ಅಂಗನವಾಡಿ ಕೇಂದ್ರ-1ಕ್ಕೆ ಭೂಲಕ್ಷ್ಮೀ ಗಂಡ ಪ್ರಾಣೇಶ, ಮಾಟಮಾರಿ ಅಂಗನವಾಡಿ ಕೇಂದ್ರ-4ಕ್ಕೆ ಗಂಗಮ್ಮ ಗಂಡ ನರಸಿಂಹ, ರಾಯಚೂರು ನಗರಸಭೆ ವ್ಯಾಪ್ತಿಯ ಯರಮರಸ್ ದಂಡು ಅಂಗನವಾಡಿ ಕೇಂದ್ರ-2ಕ್ಕೆ ವಿಜಯಲಕ್ಷ್ಮೀ ಗಂಡ ಆಂಜನೇಯ್ಯ ಇವರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದ್ದು, ಈ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆ ಅರ್ಜಿ ಸಲ್ಲಿಸುವವರು ಸೂಕ್ತ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 3ರಸಂಜೆ 5.30ರೊಳಗೆ ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ಗಿಲ್ಲೇಸೂಗೂರು ಅವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಾರ್ಯಾಲಯ ಗಿಲ್ಲೇಸೂಗೂರು ಅವರನ್ನು ಸಂಪರ್ಕಿಸುವಂತೆ ಗಿಲ್ಲೇಸೂಗೂರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande