ಬಳ್ಳಾರಿ, 09 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಜಿಲ್ಲೆಯ ಜಿಲ್ಲೆಯ ರೈತರಿಂದ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಬಾಕಿ ಉಳಿಸಿಕೊಂಡಿರುವ 78 ಕೋಟಿ ರೂಪಾಯಿ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಲು ಕೋರಿ ತುಂಗಭದ್ರ ರೈತ ಸಂಘ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರಿಗೆ ಶನಿವಾರ ಮನವಿ ಸಲ್ಲಿಸಿದೆ.
ಶಾಸಕ ಬಿ. ನಾಗೇಂದ್ರ ಅವರ ಕಚೇರಿಯಲ್ಲಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾನತಾಡಿದ ದರೂರು ಪುರುಷೋತ್ತಮ ಗೌಡ ಅವರು, ಬೇಸಿಗೆಯಲ್ಲಿ ಕರ್ನಾಟಕ ಸರ್ಕಾರ ರೈತರಿಂದ ಬೆಂಬಲ ಬೆಲೆಯಲ್ಲಿ ಜಿಲ್ಲೆಯ 12 ಖರೀದಿ ಕೇಂದ್ರಗಳ ಮೂಲಕ ರೂ.3,371 ನಂತೆ ಹೈಬ್ರಿಡ್ ಜೋಳವನ್ನು ಹಾಗೂ ರೂ.3421 ನಂತೆ ಬಿಳಿ ಜೋಳವನ್ನು 3,739 ರೈತರಿಂದ ಖರೀದಿಸಿದೆ. ಈ ಮೊತ್ತವು 78 ಕೋಟಿ ರೂಪಾಯಿಗಳಾಗಿದೆ. ಆದರೆ, ಸರ್ಕಾರ ಈವರೆಗೂ ಹಣ ಪಾವತಿಸಿಲ್ಲ. ಕಾರಣ ಸರ್ಕಾರ ತಕ್ಷಣವೇ ಹಣ ಪಾವತಿಸಿ, ರೈತರಿಗೆ ನೆರವಾಗಬೇಕು ಎಂದು ಕೋರಿದರು.
ಶಾಸಕ ಬಿ. ನಾಗೇಂದ್ರ ಅವರು, ತಕ್ಷಣವೇ ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಎಪಿಎಂಸಿ ಸಚಿವರ ಗಮನಕ್ಕೆ ತಂದು, ತ್ವರಿತವಾಗಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್