ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ : ಆಕ್ಷೇಪಣೆಗೆ ಆಹ್ವಾನ.
ಹೊಸಪೇಟೆ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಮೆದುಳು ಉಪಕ್ರಮ ಕಾರ್ಯಕ್ರಮದಡಿ, ವಿಜಯನಗರ ಜಿಲ್ಲೆಯಲ್ಲಿ ಮಂಜೂರಾಗಿರುವ ನ್ಯೂರೋಲೋಜಿಸ್ಟ್, ಎಂಡಿ ಫಿಜೀಷಿಯನ್, ಎಂಬಿಬಿಎಸ್, ನರ್ಸ್, ಫಿಜಿಯೋಥೆರಿಪಿಸ್ಟ್, ಸ್ಪೀಚ್ ಥೇರಪಿಸ್ಟ್ (ಸ್ಪೀಚ್ಚ್ ಮತ್ತು ಲಾಂಗ್‍ವೇಜ್ ಫಥೋಲಾಜಿಸ್ಟ್) ಮತ್ತು ಜಿಲ್ಲ
ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ : ಆಕ್ಷೇಪಣೆಗೆ ಆಹ್ವಾನ.


ಹೊಸಪೇಟೆ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮೆದುಳು ಉಪಕ್ರಮ ಕಾರ್ಯಕ್ರಮದಡಿ, ವಿಜಯನಗರ ಜಿಲ್ಲೆಯಲ್ಲಿ ಮಂಜೂರಾಗಿರುವ ನ್ಯೂರೋಲೋಜಿಸ್ಟ್, ಎಂಡಿ ಫಿಜೀಷಿಯನ್, ಎಂಬಿಬಿಎಸ್, ನರ್ಸ್, ಫಿಜಿಯೋಥೆರಿಪಿಸ್ಟ್, ಸ್ಪೀಚ್ ಥೇರಪಿಸ್ಟ್ (ಸ್ಪೀಚ್ಚ್ ಮತ್ತು ಲಾಂಗ್‍ವೇಜ್ ಫಥೋಲಾಜಿಸ್ಟ್) ಮತ್ತು ಜಿಲ್ಲಾ ಸಂಯೋಜಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 12 ರಂದು, ಸಂಜೆ 5 ಗಂಟೆಯೊಳಗೆ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಲು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ರಾಧಿಕಾ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande