ಭಾರತ ಅಮೆರಿಕಕ್ಕೆ ಉತ್ತಮ ವ್ಯಾಪಾರ ಪಾಲುದಾರನಲ್ಲ – ಟ್ರಂಪ್
ವಾಷಿಂಗ್ಟನ್, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಭಾರತ ತನ್ನಲ್ಲಿಗೆ ಹೆಚ್ಚು ಸುಂಕ ವಿಧಿಸುತ್ತಿರುವುದರಿಂದ ಅಮೆರಿಕ ಅದರೊಂದಿಗೆ ಕಡಿಮೆ ಮಟ್ಟದ ವ್ಯಾಪಾರ ನಡೆಸುತ್ತದೆ. ಈ ಕಾರಣದಿಂದ ಭಾರತ ಅಮೆರಿಕಕ್ಕೆ ಉತ್ತಮ ವ್ಯಾಪಾರ ಪಾಲುದಾರನಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಆರೋಪಿಸಿದ್ದಾರೆ.
Trump


ವಾಷಿಂಗ್ಟನ್, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭಾರತ ತನ್ನಲ್ಲಿಗೆ ಹೆಚ್ಚು ಸುಂಕ ವಿಧಿಸುತ್ತಿರುವುದರಿಂದ ಅಮೆರಿಕ ಅದರೊಂದಿಗೆ ಕಡಿಮೆ ಮಟ್ಟದ ವ್ಯಾಪಾರ ನಡೆಸುತ್ತದೆ. ಈ ಕಾರಣದಿಂದ ಭಾರತ ಅಮೆರಿಕಕ್ಕೆ ಉತ್ತಮ ವ್ಯಾಪಾರ ಪಾಲುದಾರನಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಆರೋಪಿಸಿದ್ದಾರೆ.

ಸಿಎನ್‌ಬಿಸಿಗೆ ಆಗಸ್ಟ್ 5ರಂದು ನೀಡಿದ ಸಂದರ್ಶನದ ಕೆಲ ಆಯ್ದ ಭಾಗಗಳನ್ನು ಶ್ವೇತಭವನ ತನ್ನ ಪ್ರಸಾರ ವಿಭಾಗದಲ್ಲಿ ಬಿಡುಗಡೆ ಮಾಡಿದೆ.

ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್ ಭಾರತ ನಮಗೆ ಬಹುಮಟ್ಟಿಗೆ ವಾಣಿಜ್ಯ ವ್ಯಾಪಾರ ಮಾಡುತ್ತದೆ. ಆದರೆ ನಾವು ಭಾರತಕ್ಕೆ ಅಷ್ಟೇ ಮಟ್ಟದಲ್ಲಿ ವಾಣಿಜ್ಯ ವ್ಯಾಪಾರ ಮಾಡುತ್ತಿಲ್ಲ. ಹಾಗಾಗಿ ನಾನು ಶೇಕಡಾ 25ರಷ್ಟು ಸುಂಕ ವಿಧಿಸಿದ್ದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.

ಅವರು ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಭಾರತವನ್ನು ಗುರಿಯಾಗಿಸಿದ್ದು, “ಭಾರತ ಯುದ್ಧ ವಿಮಾನಗಳಿಗೆ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಇದು ಅಸಮತೋಲತೆಯ ಪರಿಕಲ್ಪನೆಯನ್ನು ಮೂಡಿಸುತ್ತದೆ” ಎಂದಿದ್ದಾರೆ.

ತಮ್ಮ ಎರಡನೇ ಅವಧಿಯ ಸಾಧನೆಗಳನ್ನು ವಿವರಿಸುತ್ತಾ, ಚೀನಾದೊಂದಿಗೆ ವ್ಯವಹಾರ ಒಪ್ಪಂದ ಸಾಧ್ಯತೆಗಳ ಬಗ್ಗೆ ಧ್ವನಿ ಎತ್ತಿದರು. ವರ್ಷಾಂತ್ಯದೊಳಗೆ ನಾನು ಚೀನಾದ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ. ಒಪ್ಪಂದ ಬಹುಶಃ ಹತ್ತಿರದಲ್ಲಿದೆ ಎಂದು ಹೇಳಿದ್ದಾರೆ.

ಟ್ರಂಪ್ ಅವರು ಈ ವೇಳೆ ಅಮೆರಿಕದ ಔಷಧದ ಬೆಲೆ ತಗ್ಗಿಸುವ ಯೋಜನೆ, ವಿದೇಶಿ ಕಾರ್ಮಿಕರ ಆಮದು ಕಡಿತ, ಮತ್ತು ವಿಶ್ವದ ಮುಂದೆ ಅಮೆರಿಕದ ಟ್ರಿಲಿಯನ್ ಡಾಲರ್ ಗಳಿಕೆಯ ಐತಿಹಾಸಿಕ ವ್ಯಾಪಾರ ಒಪ್ಪಂದಗಳ ಬಗ್ಗೆ ಪ್ರಸ್ತಾಪಿಸಿದರು.

ಇದೇ ಸಂದರ್ಭದಲ್ಲೇ, ಅಮೆರಿಕ ಸೆಮಿಕಂಡಕ್ಟರ್‌ಗಳಂತಹ ತಾಂತ್ರಿಕ ಉತ್ಪನ್ನಗಳ ಮೇಲೂ ಹೊಸ ಸುಂಕಗಳನ್ನು ವಿಧಿಸಲು ಸಿದ್ಧತೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ. “ಇವುಗಳನ್ನು ನಾವು ದೇಶೀಯವಾಗಿ ತಯಾರಿಸಲು ಬಯಸುತ್ತೇವೆ. ಈಗ ತೈವಾನ್‌ನಿಂದ ಹೆಚ್ಚಿನ ಚಿಪ್‌ಗಳು ಬರುತ್ತಿವೆ” ಎಂದ ಅವರು, ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande