ವಿಜಯಪುರ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ
ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದಲ್ಲಿ ಬುಧವಾರ ನಸುಕಿನ ಜಾವ ಸುರಿದ ಜೋರು ಮಳೆಗೆ ಚರಂಡಿ ಕಟ್ಟೆ ಒಡೆದು ಮನೆಗೆ ನೀರು ನುಗ್ಗಿದೆ.
ಈ ಪರಿಣಾಮವಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಮಳೆ ನೀರಿನ ಜತೆಗೆ ಚರಂಡಿ ನೀರು ಹರಿದು ಮನೆಯೊಳಗೆ ನುಗ್ಗಿದ್ದರಿಂದ ದನಗಿಟ್ಟ ಮೇವು, ದವಸ ಧಾನ್ಯ, ಪಾತ್ರೆ ಪಗಡೆ ನೀರುಪಾಲಾಗಿದೆ.ಮನೆಯಲ್ಲಿ ಸೇರಿದ ಮಳೆ ನೀರನ್ನು ತುಂಬಿ ಹೊರಚಲ್ಲುವ ಕಾರ್ಯ ಆರಂಭಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande