ವಿಜಯಪುರ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆ ಭಾರಿ ಮಳೆಗೆ ಅಪಾಯಮಟ್ಟ ದಾಟಿ ಹರಿಯುತ್ತಿರುವ ಡೋಣಿ ನದಿ ಹರಿಯುತ್ತಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ರಸ್ತೆ ಅಂಚಿಗೆ ಡೋಣಿ ನದಿ ಬಂದಿದೆ. ಇನ್ನೂ ಪ್ರತಿ ವರ್ಷ ಡೋಣಿ ನದಿ ಪ್ರವಾಹದಿಂದ ರೈತರಿಗೆ ಸಾಕಷ್ಟು ಹಾನಿಯಾಗುತ್ತದೆ. ಬೆಳೆದ ಬೆಳೆಗಳು ನೀರುಪಾಲಾಗಿ ರೈತರಿಗೆ ಸಂಕಷ್ಟ ಸಿಲುಕಿಕೊಂಡಿದ್ದಾರೆ.
ನದಿ ಪಾತ್ರದಲ್ಲಿ ಹೂಳು ತುಂಬಿ ಅವಘಡ ಸೃಷ್ಟಿಸಿದೆ. ನದಿ ಪಾತ್ರದಲ್ಲಿ ಬೆಳೆದ ಗಿಡಗಂಟಿಗಳು, ನದಿಯು ಅಡ್ಡಾದಿಡ್ಡಿ ಹರಿಯುವದರಿಂದ ನದಿ ತೀರದ ರೈತರಿಗೆ ಸಂಕಷ್ಟ ಎದುರಾಗಿದೆ.
ಡೋಣಿ ನದಿ ಹೂಳೆತ್ತುವಂತೆ ಹಲವು ಬಾರಿ ರೈತರಿಂದ ಮನವಿ ಮಾಡಲಾಗಿದೆ. ರೈತರ ಮನವಿಗೆ ಸ್ಪಂದಿಸದ ಸರ್ಕಾರಗಳಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೋಣಿ ನದಿ ಪಾತ್ರದಲ್ಲಿ ತಮ್ಮ ಜಮೀನುಗಳಲ್ಲಿ ಮೋಟಾರ್ ಪಂಪ್ ಗಳನ್ನು ಉಳಿಸಲು ರೈತರ ಹರಸಾಹಸ ಪಡುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande