ಬಳ್ಳಾರಿ : ಬಾಲಕನ ಪೋಷಕರಿಗೆ 13 ಲಕ್ಷ ರೂ ಪರಿಹಾರ ಮತ್ತು ಉದ್ಯೋಗದ ಭರವಸೆ
ಬಳ್ಳಾರಿ, 06 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಮಹಾನಗರಪಾಲಿಕೆಯ ಕಸ ಸಂಗ್ರಹದ ವಾಹನ ಡಿಕ್ಕಿ ಹೊಡೆದಾಗ ಮೃತಪಟ್ಟ ಬಾಪೂಜಿ ನಗರದ ಬಾಲಕ ವಿಕ್ಕಿ (03)ನ ಪೋಷಕರಿಗೆ ಶಾಸಕ ನಾರಾ ಭರತರೆಡ್ಡಿ ಅವರು ಒಟ್ಟು 13 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್ ಅನ್ನು ವಿತರಣೆ ಮಾಡಿದ್ದಾರೆ. ಬಳ್ಳಾರಿ ಮಹಾನಗರ
ಬಳ್ಳಾರಿ : ಬಾಲಕನ ಪೋಷಕರಿಗೆ 13 ಲಕ್ಷ ರೂ ಪರಿಹಾರ ಮತ್ತು ಉದ್ಯೋಗದ ಭರವಸೆ


ಬಳ್ಳಾರಿ : ಬಾಲಕನ ಪೋಷಕರಿಗೆ 13 ಲಕ್ಷ ರೂ ಪರಿಹಾರ ಮತ್ತು ಉದ್ಯೋಗದ ಭರವಸೆ


ಬಳ್ಳಾರಿ, 06 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಮಹಾನಗರಪಾಲಿಕೆಯ ಕಸ ಸಂಗ್ರಹದ ವಾಹನ ಡಿಕ್ಕಿ ಹೊಡೆದಾಗ ಮೃತಪಟ್ಟ ಬಾಪೂಜಿ ನಗರದ ಬಾಲಕ ವಿಕ್ಕಿ (03)ನ ಪೋಷಕರಿಗೆ ಶಾಸಕ ನಾರಾ ಭರತರೆಡ್ಡಿ ಅವರು ಒಟ್ಟು 13 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್ ಅನ್ನು ವಿತರಣೆ ಮಾಡಿದ್ದಾರೆ.

ಬಳ್ಳಾರಿ ಮಹಾನಗರ ಪಾಲಿಕೆಯಿಂದ 5 ಲಕ್ಷ ರೂಪಾಯಿ, ಅಪಘಾತ ವಿಮೆಯಿಂದ 5 ಲಕ್ಷ ರೂಪಾಯಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ರೂಪಾಯಿ ಒಟ್ಟು 13 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಪಾವತಿಸಲಾಗಿದೆ ಎಂದು ಶಾಸಕ ನಾರಾ ಭರತರೆಡ್ಡಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಥಳೀಯ ಮುಖಂಡ ಸತೀಶ್ ಅವರು 25 ಸಾವಿರ ರೂ.ಗಳ ಪರಿಹಾರವನ್ನು ನೀಡಿದ್ದಾರೆ. ಮೃತ ಬಾಲಕನ ಪೋಷಕರಿಗೆ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಖಲೀಲಸಾಬ, ಮುನಾಫ್ ಪಟೇಲ್, ಕಾರ್ಪೊರೇಟರ್ ಎಂ. ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡರಾದ ಶಿವರಾಜ್, ಸೂರಿ, ಹೊನ್ನಪ್ಪ, ಹಗರಿ ಗೋವಿಂದ, ಬಾಪೂಜಿ ನಗರ ವೆಂಕಟೇಶ, ಚಾನಾಳ್ ಶೇಖರ್, ಸತೀಶ್, ಪ್ರೇಂ, ಭರತ್, ಬಾಲರಾಜು, ಬುಜ್ಜಿ ಇನ್ನಿತರರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande