ವಿಜಯಪುರ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆ ಮೇಲೆ ಹರಿದ ನೀರಿನ ಪರಿಣಾಮವಾಗಿ ಬೈಕ್ ಕೊಚ್ಚಿ ಹೋಗಿ, ಸವಾರ ಪಾರಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ- ವಿಜಯಪುರ ರಸ್ತೆಯಲ್ಲಿರುವ ಸಂಗಮನಾಥ ದೇವಸ್ಥಾನ ಹಳ್ಳದಲ್ಲಿ ನಡೆದಿದೆ.
ಅಪಾಯದ ಮಟ್ಟ ಮೀರಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇನ್ನು ಕಳ್ಳಕವಟಗಿ ಗ್ರಾಮದ ಶ್ರೀಶೈಲ್ ಗಿಡ್ನವರ ಯುವಕನ ಬೈಕ್ ನೀರಿನಲ್ಲಿ ಕೊಚ್ಚಿ ಹೋಗಿದೆ.
ಬೈಕ್ ಗಾಗಿ ಹಳ್ಳದಲ್ಲಿ ಗ್ರಾಮಸ್ಥರಿಂದ ಹುಡುಕಾಟ ನಡೆಸಿದರು. ಅಲ್ಲದೇ, ಸಂಗಮನಾಥ ದೇವಸ್ಥಾನ ಸಂಪೂರ್ಣವಾಗಿ ಜಲಾವೃತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande