ಬಳ್ಳಾರಿ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರದ ಶ್ರೀ ಕರಿಮಾರೆಮ್ಮ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಆಗಸ್ಟ್ 12 ರಂದು ಮಂಗಳವಾರ ಜರುಗಲಿದೆ.
ಅಂದು ಬೆಳಿಗ್ಗೆ 08.30 ಗಂಟೆಗೆ ಪ್ರತಿ ವರ್ಷದಂತೆ ಕೌಲ್ ಬಜಾರ್‌ನ ಮುಖ್ಯರಸ್ತೆಯಿಂದ ಶ್ರೀ ಕರಿಮಾರೆಮ್ಮನವರ ಉತ್ಸವ ಪ್ರಾರಂಭಗೊ0ಡು ಮಧ್ಯಾಹ್ನ ದೇವಸ್ಥಾನಕ್ಕೆ ತಲುಪುತ್ತದೆ.
ಅಂದು ಸಂಜೆ 04 ಗಂಟೆಯ ನಂತರ ಮಹಾಕುಂಭ ಜಲ ಉತ್ಸವ ಜರುಗುತ್ತದೆ. ಉತ್ಸವದಲ್ಲಿ ಡೊಳ್ಳು ಕುಣಿತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್