ವಿಜಯಪುರ, 06 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಿಪಿಐ ಡ್ರೈವರ್ ಕಮ್ ಹಾಗೂ ಪೊಲೀಸ್ ಪೇದೆಗೆ ಕಳ್ಳರು ಚಾಕು ಇರಿತ ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ.
ಸಿಪಿಐ ಡ್ರೈವರ್ ಹಾಗೂ ಪೊಲೀಸ್ ಪೇದೆ ರಮೇಶ ಗೂಳಿಗೆ ಕಳ್ಳರು ಚಾಕು ಇರಿದಿದ್ದಾರೆ. ತೊಡೆ ಹಾಗೂ ಮತ್ತೇರಡು ಕಡೆಗೆ ಚಾಕು ಇರಿತವಾಗಿದೆ. ನಿನ್ನೆ ತಡರಾತ್ರಿ ಬಸವನಬಾಗೇವಾಡಿಯಲ್ಲಿ ಕಳ್ಳರಿಂದ ಕಳ್ಳತನಕ್ಕೆ ಯತ್ನ ನಡೆದಿದೆ.
ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಈ ವೇಳೆ ರಮೇಶ ಓರ್ವ ಕಳ್ಳನ್ನು ಹಿಡಿದಾಗ ಮತ್ತೊರ್ವ ಕಳ್ಳನಿಂದ ಚಾಕು ಇರಿದು ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ರಮೇಶ ವಿಜಯಪುರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಗಳು ಭೇಟಿ ಪರಿಶೀಲನೆ ನಡೆಸಿದರು. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande