ಐಎಸ್‌ಎಲ್ ಭವಿಷ್ಯ ಅಸ್ಥಿರತೆ : ಬೆಂಗಳೂರು ಎಫ್‌ಸಿ ವೇತನ ಸ್ಥಗಿತ
ನವದೆಹಲಿ, 05 ಆಗಸ್ಟ್ (ಹಿ.ಸ.) : ಆ್ಯಂಕರ್ : ಇಂಡಿಯನ್ ಸೂಪರ್ ಲೀಗ್ ಭವಿಷ್ಯದ ಕುರಿತು ನಿರ್ಮಾಣವಾಗಿರುವ ಅಸ್ಥಿರತೆ ನಡುವೆ, ಬೆಂಗಳೂರು ಎಫ್‌ಸಿ ತನ್ನ ಮೊದಲ ತಂಡದ ಆಟಗಾರರು ಮತ್ತು ಸಿಬ್ಬಂದಿಗೆ ನೀಡಬೇಕಿದ್ದ ವೇತನವನ್ನು ಸ್ಥಗಿತಗೊಳಿಸಿದೆ. ಈ ಕುರಿತು ಕ್ಲಬ್ ತನ್ನ ಅಧಿಕೃತ ಹೇಳಿಕೆಯಲ್ಲಿ, “ಲೀಗ್ ಭವಿ
Football


ನವದೆಹಲಿ, 05 ಆಗಸ್ಟ್ (ಹಿ.ಸ.) :

ಆ್ಯಂಕರ್ : ಇಂಡಿಯನ್ ಸೂಪರ್ ಲೀಗ್ ಭವಿಷ್ಯದ ಕುರಿತು ನಿರ್ಮಾಣವಾಗಿರುವ ಅಸ್ಥಿರತೆ ನಡುವೆ, ಬೆಂಗಳೂರು ಎಫ್‌ಸಿ ತನ್ನ ಮೊದಲ ತಂಡದ ಆಟಗಾರರು ಮತ್ತು ಸಿಬ್ಬಂದಿಗೆ ನೀಡಬೇಕಿದ್ದ ವೇತನವನ್ನು ಸ್ಥಗಿತಗೊಳಿಸಿದೆ.

ಈ ಕುರಿತು ಕ್ಲಬ್ ತನ್ನ ಅಧಿಕೃತ ಹೇಳಿಕೆಯಲ್ಲಿ, “ಲೀಗ್ ಭವಿಷ್ಯದ ಬಗ್ಗೆ ಸ್ಪಷ್ಟತೆಯ ಕೊರತೆಯೇ ಈ ನಿರ್ಧಾರಕ್ಕೆ ಕಾರಣ. ನಾವು ಆಟಗಾರರು ಮತ್ತು ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ತಿಳಿಸಿದೆ.

ಜುಲೈ 11 ರಂದು ಐಎಸ್ಎಲ್ ಆಯೋಜಕ ಎಫ್‌ಎಸ್‌ಡಿಎಲ್ 2025–26 ಸಾಲಿನಲ್ಲಿ ತಾತ್ಕಾಲಿಕವಾಗಿ ಮುಂದೂಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಡಿಸೆಂಬರ್ 8 ರಂದು ಎಐಎಫ್‌ಎಫ್ ಹಾಗೂ ಎಫ್‌ಎಸ್‌ಡಿಎಲ್ ನಡುವಿನ ಮಾಸ್ಟರ್ ರೈಟ್ಸ್ ಒಪ್ಪಂದ ಅವಧಿ ಅಂತ್ಯವಾಗಲಿದೆ.

ಭಾರತೀಯ ಫುಟ್‌ಬಾಲ್‌ನ ಭವಿಷ್ಯದ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳುವಂತೆ ಎಐಎಫ್‌ಎಫ್ ಹಾಗೂ ಎಫ್‌ಎಸ್‌ಡಿಎಲ್‌ಗೆ ಬೆಂಗಳೂರು ಎಫ್‌ಸಿ ಮನವಿ ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande