ಸರಕಾರಕ್ಕೆ ಒಳ ಮೀಸಲಾತಿ ವರದಿ ಸಲ್ಲಿಕೆ
ಬೆಂಗಳೂರು, 04 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದ ಮಹತ್ವದ ಅಧ್ಯಯನ ವರದಿಯನ್ನು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ರವರ ಅಧ್ಯಕ್ಷತೆಯ ಆಯೋಗ 1766 ಪುಟಗಳ ವರದಿ ಹಾಗೂ ಆರು ಪ್ರಮುಖ ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಮುಖ್ಯಮಂತ್ರಿ ಸ
Report


ಬೆಂಗಳೂರು, 04 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ಸಂಬಂಧಿಸಿದ ಮಹತ್ವದ ಅಧ್ಯಯನ ವರದಿಯನ್ನು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ರವರ ಅಧ್ಯಕ್ಷತೆಯ ಆಯೋಗ 1766 ಪುಟಗಳ ವರದಿ ಹಾಗೂ ಆರು ಪ್ರಮುಖ ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ಸಲ್ಲಿಸಿದೆ. ಈ ಮೂಲಕ 30 ವರ್ಷಗಳಿಂದ ನಡೆಯುತ್ತಿದ್ದ ಒಳ ಮೀಸಲಾತಿಗೆ ಸಂಬಂಧಿಸಿದ ಹೋರಾಟಕ್ಕೆ ತಿರುವು ಸಿಕ್ಕಿದೆ.

2024ರ ಆಗಸ್ಟ್ 1 ರಂದು ಭಾರತದ ಸರ್ವೋಚ್ಚ ನ್ಯಾಯಾಲಯವು ದವಿಂದರ್ ಸಿಂಗ್ ಪ್ರಕರಣದಲ್ಲಿ ನೀಡಿದ ಮಹತ್ವದ ತೀರ್ಪಿನಲ್ಲಿ ಉಪವರ್ಗೀಕರಣ ಮಾಡುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇದ್ದು, ಇದು ಸಂವಿಧಾನದ ಅನುಚ್ಛೇದ 14ರ ಸಮ್ಮತವಾಗಿದೆ ಎಂದು ಸ್ಪಷ್ಟಪಡಿಸಿತ್ತು. ಇದನ್ನು ಸಾಮಾಜಿಕ ನ್ಯಾಯದ ವಿಸ್ತರಣೆ ಎಂದು ಪರಿಗಣಿಸಿದ ನ್ಯಾಯಾಲಯ, ಮೀಸಲಾತಿ ಅನುಭವಿಸುತ್ತಿರುವ ಯಾವುದೇ ಸಮುದಾಯದ ಹಕ್ಕಿಗೆ ಧಕ್ಕೆಯಾಗದಂತೆ ಉಪವರ್ಗೀಕರಣ ನಡೆಸಬಹುದು ಎಂದು ತಿಳಿಸಿತ್ತು.

ಈ ತೀರ್ಪಿನ ಅನ್ವಯ ಕರ್ನಾಟಕ ಸರ್ಕಾರವು 2025ರ ಜನವರಿಯಲ್ಲಿ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು. ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳ ಆಂತರಿಕ ಸ್ಥಿತಿಗತಿಗಳನ್ನು ವಿಶ್ಲೇಷಿಸುವ ಉದ್ದೇಶದಿಂದ ಈ ಆಯೋಗವು ಮಧ್ಯಂತರ ವರದಿಯನ್ನು 2025ರ ಮಾರ್ಚ್ 27ರಂದು ಸಲ್ಲಿಸಿತು. ಈ ಮಧ್ಯಂತರ ವರದಿಯಲ್ಲಿ ನಿಖರ ದತ್ತಾಂಶದ ಅಗತ್ಯತೆಯನ್ನು ಒತ್ತಿಹೇಳಲಾಗಿದ್ದು, ಸರ್ಕಾರ ಕೂಡಲೇ ಸಮಗ್ರ ಸಮೀಕ್ಷೆ ನಡೆಸಲು ತೀರ್ಮಾನಿಸಿತು.

ಮೇ 5 ರಿಂದ ಜುಲೈ 6 ರವರೆಗೆ ನಡೆದ ಸಮೀಕ್ಷೆಯಲ್ಲಿ ರಾಜ್ಯದ 27,24,768 ಕುಟುಂಬಗಳು ಮತ್ತು 1,07,01,982 ಜನರು ಭಾಗವಹಿಸಿದರು. ಈ ಸಮೀಕ್ಷೆಯು ಶೈಕ್ಷಣಿಕ, ಉದ್ಯೋಗ ಮತ್ತು ಸಾಮಾಜಿಕ ಹಿನ್ನಲೆಯಲ್ಲಿ ಒಳಜಾತಿಗಳ ಸ್ಥಿತಿಯನ್ನು ಅಳೆಯುವ ಹಿನ್ನಲೆಯಲ್ಲಿ ನಡೆಯಿತು.

ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಆಯೋಗವು ದತ್ತಾಂಶವನ್ನು ಸಕ್ರಿಯವಾಗಿ ವಿಶ್ಲೇಷಿಸಿ ಪರಿಶಿಷ್ಟ ಜಾತಿಗಳ ವರ್ಗೀಕರಣಕ್ಕೆ ಆದ್ಯತೆ ನೀಡಿದೆ. ಶೈಕ್ಷಣಿಕ ಹಿಂದುಳಿತತೆ, ಸರ್ಕಾರಿ ಉದ್ಯೋಗಗಳಲ್ಲಿ ಪ್ರಾತಿನಿಧ್ಯದ ಕೊರತೆ ಮತ್ತು ಸಾಮಾಜಿಕ ಹಿನ್ನಲೆ ಎಂಬ ಮೂರು ಪ್ರಮುಖ ಮಾನದಂಡಗಳ ಆಧಾರದ ಮೇಲೆ ಜಾತಿಗಳ ಉಪವರ್ಗೀಕರಣ ಮಾಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande