ಪಾಟ್ನಾ, 04 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಿಹಾರದ ಭಾಗಲ್ಪುರ ಜಿಲ್ಲೆಯ ಶಹಕುಂಡ್-ಸುಲ್ತಾನಗಂಜ್ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಪಿಕಪ್ ವಾಹನ ನದಿಗೆ ಉರುಳಿದ ಪರಿಣಾಮ ಐದು ಯಾತ್ರಿಕರು ದುರ್ಮರಣಕ್ಕೆ ಒಳಗಾದ ಘಟನೆ ನಡೆದಿದೆ.
ಪೊಲೀಸ ಮಾಹಿತಿ ಪ್ರಕಾರ ಶಹಕುಂಡ್‌ನ 12 ಯುವಕರ ಗುಂಪು ಗಂಗಾನದಿಯಲ್ಲಿ ಸ್ನಾನ ಮಾಡಿ ನೀರು ಅರ್ಪಿಸಲು ಸುಲ್ತಾನಗಂಜ್ ಕಡೆ ಹೋಗುತ್ತಿದ್ದಾಗ, ಮಳೆ ನೀರಿನಿಂದ ತುಂಬಿದ ನದಿಗೆ ಪಿಕಪ್ ವ್ಯಾನ್ ಬಿದ್ದಿದೆ. ಡಿಜೆ ಸಂಗೀತದ ಮಧ್ಯೆ ಚಾಲಕ ನಿಯಂತ್ರಣ ತಪ್ಪಿದ ಕಾರಣ ಈ ಅಪಘಾತ ಸಂಭವಿಸಿದೆ.
ಈ ದುರಂತದಲ್ಲಿ ಸಂತೋಷ್ ಕುಮಾರ್, ಮನೋಜ್ ಕುಮಾರ್, ವಿಕ್ರಮ್ ಕುಮಾರ್, ಅಂಕುಶ್ ಕುಮಾರ್ ಮತ್ತು ಮುನ್ನಾ ಕುಮಾರ್ ಮೃತರಾಗಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa