ಓವಲ್ ಟೆಸ್ಟ್ : ಇಂಗ್ಲೆಂಡ್ ಗೆಲುವಿಗೆ 35 ರನ್, ಭಾರತಕ್ಕೆ 4 ವಿಕೆಟ್ ಅಗತ್ಯ
ಲಂಡನ್, 04 ಆಗಸ್ಟ್ (ಹಿ.ಸ.) : ಆ್ಯಂಕರ್ : ಐದನೇ ಟೆಸ್ಟ್‌ನ ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್‌ಗೆ 339 ರನ್ ಗಳಿಸಿದ್ದು, ಗೆಲ್ಲಲು ಕೇವಲ 35 ರನ್ ಅಗತ್ಯವಿದೆ. ಭಾರತಕ್ಕೆ ಜಯಕ್ಕಾಗಿ ಇನ್ನೂ 4 ವಿಕೆಟ್ ಬೇಕಾಗಿದೆ. ಬೆನ್ ಡಕೆಟ್ (54), ಓಲಿ ಪೋಪ್ (27) ಅವರ ವಿಕೆಟ್ ಗಳಿಸಿದ ಭಾರತ, ಜ
Cricket


ಲಂಡನ್, 04 ಆಗಸ್ಟ್ (ಹಿ.ಸ.) :

ಆ್ಯಂಕರ್ : ಐದನೇ ಟೆಸ್ಟ್‌ನ ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್‌ಗೆ 339 ರನ್ ಗಳಿಸಿದ್ದು, ಗೆಲ್ಲಲು ಕೇವಲ 35 ರನ್ ಅಗತ್ಯವಿದೆ. ಭಾರತಕ್ಕೆ ಜಯಕ್ಕಾಗಿ ಇನ್ನೂ 4 ವಿಕೆಟ್ ಬೇಕಾಗಿದೆ.

ಬೆನ್ ಡಕೆಟ್ (54), ಓಲಿ ಪೋಪ್ (27) ಅವರ ವಿಕೆಟ್ ಗಳಿಸಿದ ಭಾರತ, ಜೋ ರೂಟ್ (105) ಮತ್ತು ಹ್ಯಾರಿ ಬ್ರೂಕ್ (111) ನಡುವಿನ 195 ರನ್‌ಗಳ ಭರ್ಜರಿ ಜೊತೆಯಾಟದ ನಂತರ ಪಂದ್ಯ ಹಿಡಿತಕ್ಕೆ ಬಂದಿತ್ತು. ಆದರೆ ನಂತರದ ಮೂರು ವಿಕೆಟ್ ಗಳ ಪತನದಿಂದ ಪಂದ್ಯ ತೀವ್ರ ತಿರುವು ಪಡೆದಿದೆ.

ಕಳಪೆ ಬೆಳಕು ಹಾಗೂ ಮಳೆಯಿಂದಾಗಿ ದಿನದಾಟ ಮುಗಿದಿದ್ದು, ಕೊನೆಯ ದಿನ ಭಾರತ ಹಾಗೂ ಇಂಗ್ಲೆಂಡ್‌ ಗೆಲುವಿಗೆ ಸೆಣಸಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande