ವಾರಣಾಸಿ, 04 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಾರಣಾಸಿಯಲ್ಲಿ ಭಾರಿ ಮಳೆಯಿಂದಾಗಿ ಗಂಗಾ ನದಿಯ ಪ್ರವಾಹ ಭೀಕರ ಸ್ವರೂಪವನ್ನು ಪಡೆದಿದ್ದು, ನದಿ ನೀರು ಅಪಾಯದ ಮಟ್ಟವಾದ 71.26 ಮೀಟರ್‌ನಿಂದ 73.90 ಮೀಟರ್‌ಗೆ ಏರಿದೆ.
ನಗರದ ದಶಾಶ್ವಮೇಧ, ಮಣಿಕರ್ಣಿಕಾ ಘಾಟ್, ಬಿಎಚ್‌ಯು ಟ್ರಾಮಾ ಸೆಂಟರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಶವ ಸಂಸ್ಕಾರಕ್ಕೂ ದೋಣಿಗಳ ಅವಲಂಬನೆಯಾಗಿದೆ. ಹಲವೆಡೆ ರಸ್ತೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಸದರ್ ತಹಸಿಲ್‌ನ 32 ಹಳ್ಳಿಗಳು ಮತ್ತು ನಗರದ 24 ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಪ್ರಾರಂಭಿಸಿದ್ದಾರೆ. ಬೆಳೆ ನಾಶವಾಗಿದ್ದು, ಅಂಗಡಿಗಳು ಮುಚ್ಚಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಎನ್‌ಡಿಆರ್‌ಎಫ್, ಜಲ ಪೊಲೀಸ್, ಪರಿಹಾರ ಸಂಸ್ಥೆಗಳು ಸಕ್ರಿಯವಾಗಿದ್ದು, ಪೀಡಿತರಿಗೆ ನೆರವು ಒದಗಿಸಲು ಕಾರ್ಯಾಚರಣೆ ಮುಂದುವರೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa