ಉಜ್ಜಯಿನಿ, 04 ಆಗಸ್ಟ್ (ಹಿ.ಸ.) :
ಆ್ಯಂಕರ್ : ಶ್ರಾವಣ ಮಾಸದ ಅಂಗವಾಗಿ ಭಗವಾನ್ ಮಹಾಕಾಳೇಶ್ವರನ ನಾಲ್ಕನೇ ಮೆರವಣಿಗೆಯು ಇಂದು ಸಂಜೆ 4 ಗಂಟೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಿಂದ ಆರಂಭವಾಗಲಿದೆ.
ಭಗವಾನ್ ನಾಲ್ಕು ರೂಪಗಳಲ್ಲಿ — ಚಂದ್ರಮೌಳೇಶ್ವರ (ಪಲ್ಲಕ್ಕಿ), ಮನಮೋಹನ (ಆನೆ), ಶಿವ-ತಾಂಡವ (ಗರುಡ ರಥ), ಉಮಾಮಹೇಶ (ನಂದಿ) — ಭಕ್ತರಿಗೆ ದರ್ಶನ ನೀಡಲಿದ್ದಾರೆ. ಮೆರವಣಿಗೆಯು ಪುರಾತನ ಮಾರ್ಗವಾಗಿ ರಾಮಘಾಟ್ ತಲುಪಿದ್ದು, ಅಲ್ಲಿ ಕ್ಷಿಪ್ರಾ ನದಿಯಲ್ಲಿ ಅಭಿಷೇಕದ ನಂತರ ದೇವಾಲಯಕ್ಕೆ ಮರಳಲಿದೆ.
ಬುಡಕಟ್ಟು ಕಲೆಯ ನೃತ್ಯ ತಂಡಗಳು, ಪ್ರವಾಸಿ ತಾಣಗಳ ಟ್ಯಾಬ್ಲೋಗಳು ಹಾಗೂ ನೇರ ಪ್ರಸಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಮೆರವಣಿಗೆ ಸಾಗುವ ಮಾರ್ಗದಲ್ಲಿ ವ್ಯಾಪಕ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa