ಚಂಡೀಗಡ, 04 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನದಿಂದ ಡ್ರೋನ್ ಬಳಸಿ ಮಾದಕವಸ್ತುಗಳ ಕಳ್ಳ ಸಾಗಾಣೆ ಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಿಫಲಗೊಳಿಸಿದೆ.
ಪಂಜಾಬಿನ ತರಣ್ ತರಣ್ ಜಿಲ್ಲೆಯ ಕಲ್ಸಿಯಾನ್ ಗ್ರಾಮದ ಬಳಿ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಿ 610 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಕಳ್ಳ ಸಾಗಾಣೆಗೆ ಬಳಸುತ್ತಿದ್ದ ಡಿಜೆಐ ಮಾವಿಕ್ 3 ಕ್ಲಾಸಿಕ್ ಡ್ರೋನ್‍ವನ್ನೂ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಗೂ ಮುನ್ನ, ತರಣ್ ತರಣ್‌ನ ನೂರ್ವಾಲಾ ಬಳಿ ಬಿಎಸ್‌ಎಫ್-ಪಂಜಾಬ್ ಪೊಲೀಸ್ ಜಂಟಿ ದಾಳಿಯಲ್ಲಿ ಪ್ಲಾಸ್ಟಿಕ್ ಕಂಟೇನರ್-ನಿಂದ 755 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದು ಈ ಎರಡೂ ಕಾರ್ಯಾಚರಣೆ ಮೂಲಕ ಗಡಿಯಲ್ಲಿ ಡ್ರೋನ್‌ಗಳ ಮೂಲಕ ನಡೆಯುವ ಮಾದಕ ಕಳ್ಳಸಾಗಣೆಗೆ ಬಿಎಸ್‌ಎಫ್ ಹಾಗೂ ರಾಜ್ಯ ಪೊಲೀಸರು ತಡೆಯೊಡ್ಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa