ಕುರಿ ಮತ್ತು ಅಣಬೆ ಬೇಸಾಯ ತರಬೇತಿ
ಕುರಿ ಮತ್ತು ಅಣಬೆ ಬೇಸಾಯ ತರಬೇತಿ
ಕುರಿ ಮತ್ತು ಅಣಬೆ ಬೇಸಾಯ ತರಬೇತಿ


ಕೋಲಾರ, ೩೧ ಆಗಸ್ಟ್ (ಹಿ.ಸ) :

ಆ್ಯಂಕರ್ : ನಗರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಉಚಿತ ಕುರಿ, ಮೇಕೆ ಮತ್ತು ಅಣಬೆ ಬೇಸಾಯ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತ ರಾಜ್ಯದ ಯಾವುದೇ ಜಿಲ್ಲೆಯ ೧೮ ರಿಂದ ೪೫ ವರ್ಷ ವಯೋಮಿತಿಯುಳ್ಳವರು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ೩ ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಸೆ.೩, ಬುಧವಾರದಂದು ತರಬೇತಿ ಸಂಸ್ಥೆಯಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ತರಬೇತಿಯು ೧೩ ದಿನಗಳ ಕಾಲಾವಧಿಯದಾಗಿದ್ದು, ತರಬೇತಿ ಅವಧಿಯಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತದೆ. ಅಭ್ಯರ್ಥಿಗಳಿಗೆ ತರಬೇತಿ ವೇಳೆ ಉಚಿತವಾಗಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ತರಬೇತಿ ನಂತರ ಕೇಂದ್ರ ಸರ್ಕಾರದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ತರಬೇತುದಾರರ ಮೊ.೮೯೭೧೩೦೮೭೭೬, ೭೭೬೦೩೧೩೮೩೩ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande