ವಿಜಯಪುರ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ಅಡುಗೆ ಸಿಲಿಂಡರ್ ಲೀಕ್ ಆಗಿರುವ ಪರಿಣಾಮ ಮನೆ ಒಳಗೆ ಬೆಂಕಿ ಆವರಿಸಿರುವ ಘಟನೆ ವಿಜಯಪುರ ನಗರದ ಆಶ್ರಮ ರಸ್ತೆಯ ಲೇಡಿಸ್ ಹಾಸ್ಟೇಲ್ ಬಳಿ ನಡೆದಿದೆ. ಬಿ ಎಸ್ ಬಿರಾದಾರ್ ಎಂಬುವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಮನೆಯವರು ಪಾರಾಗಿದ್ದಾರೆ.
ಅಡುಗೆ ಸಿಲೆಂಡರ್‌ನಲ್ಲಿನ ಗ್ಯಾಸ್ ಲೀಕ್ ಆಗಿ ಅವಘಡದಿಂದ ಏಕಾಏಕಿ ಬೆಂಕಿ ಹೊತ್ತುಕೊಂಡಿದೆ. ತಕ್ಷಣವೇ ಮನೆಯಿಂದ ಕುಟುಂಬಸ್ಥರು ಓಡಿ ಹೊರ ಬಂದಿದ್ದಾರೆ. ಆದ್ರೇ, ಯಾವುದೇ ಜೀವಹಾನಿ ಇಲ್ಲ ಆಗಿಲ್ಲ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande