ಕೋಲಾರ, ೩೦ ಆಗಸ್ಟ್(ಹಿ.ಸ.) :
ಆ್ಯಂಕರ್ : ಕೆಜಿಎಪ್ ತಾಲ್ಲೂಕಿನ ಬೇತಮಂಗಲ ಗ್ರಾಮದ ಹಳೇ ಬಡಾವಣೆಯ ಸ್ವಾಮಿ ವಿವೇಕಾನಂದ ಯುವಕರ ಸಂಘದ ವತಿಯಿಂದ ೩೦ ನೇ ವರ್ಷದ ಅದ್ದೂರಿ ಗಣೇಶೋತ್ಸವ ಆಚರಿಸಿ ನಂತರ ಮೂರನೇ ದಿನ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗೋಸಿನ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಯುವ ಮುಖಂಡರಾದ ಏರ್ಟೆಲ್ ಸುರೇಶ್ ಅವರು ಆಯೋಜಿಸಿದ್ದ ಎರಡನೇ ದಿನ ಈ ಟಿವಿ ಚಾನೆಲ್ ಹೆಸರಾಂತ ಡಿ(ಡ್ಯಾನ್ಸ್) ಖ್ಯಾತಿಯ ಕಲಾವಿಧಾರದ ಭೂಮಿಕಾ ಮತ್ತು ಕಾರ್ತಿಕ್ ಅವರು ಶಿವತಾಂಡವ ತಂಡದೊಂದಿಗೆ ಉತ್ತಮ ನೃತ್ಯಗಳನ್ನು ಮಾಡಿದರು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸಂಘಟನೆಗಳು,ಯುವಕರ ಸಂಘಗಳು, ವಿವಿಧ ಬಡಾವಣೆಗಳಲ್ಲಿಟ್ಟಿದ್ದ ಗಣಪನ ಮೂರ್ತಿಗಳನ್ನು ವಿಜೇಂದ್ರಸ್ವಾಮಿ ದೇವಸ್ಥಾನ ರಸ್ತೆ ಮೂಲಕ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಶ್ರದ್ಧಾಭಕ್ತಿ, ಅಭಿಮಾನಿಗಳ ಅಬ್ಬರ,ಈ ಮೆರವಣಿಗೆ ಸಾಕ್ಷಿಯಾಯಿತು.
ಗಣೇಶನ ವಿಸರ್ಜನೆಗೆ ಈ ಬಾರಿಯೂ ಗೋಸಿನ ಕೆರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೃಹತ್ ಗಣಪನ ಮೂರ್ತಿಗಳ ವಿಸರ್ಜನೆಗೆ ಕ್ರೈನ್ ಅಳವಡಿಸಲಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಇಟ್ಟ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಕೆಲವರು ಒಂದೇ ದಿನಕ್ಕೆ ಮೂರ್ತಿ ವಿಸರ್ಜಿಸಿದರೆ, ಇನ್ನು ಕೆಲವರು ಮತ್ತಷ್ಟು ದಿನ ಪೂಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಚಿತ್ರ : ಕೆಜಿಎಪ್ ತಾಲ್ಲೂಕಿನ ಬೇತಮಂಗಲ ಗ್ರಾಮದ ಹಳೇ ಬಡಾವಣೆಯ ಸ್ವಾಮಿ ವಿವೇಕಾನಂದ ಯುವಕರ ಸಂಘದ ವತಿಯಿಂದ ೩೦ ನೇ ವರ್ಷದ ಗಣೇಶೋತ್ಸವ ಆಚರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್