ಭಾನುವಾರದ ಭವಿಷ್ಯ
ಹುಬ್ಬಳ್ಳಿ, 31 ಆಗಸ್ಟ್ (ಹಿ.ಸ.) : ಆ್ಯಂಕರ್ : ಭಾನುವಾರದ ಭವಿಷ್ಯ *ಮೇಷ ರಾಶಿ.* ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕು. ವೃತ್ತಿಪರ ಕೆಲಸಗಳಲ್ಲಿ, ಅಧಿಕಾರಿಗಳೊಂದಿಗೆ ಜಾಗರೂಕರಾಗಿರಬೇಕು. ದೈವಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತೀರಿ. ಸಂಬಂಧಿಕರೊಂದಿಗೆ ಅನಿರೀಕ್ಷಿತ ವಾದ ವಿವಾದಗ
ಭಾನುವಾರದ ಭವಿಷ್ಯ


ಹುಬ್ಬಳ್ಳಿ, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭಾನುವಾರದ ಭವಿಷ್ಯ

*ಮೇಷ ರಾಶಿ.*

ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಬೇಕು. ವೃತ್ತಿಪರ ಕೆಲಸಗಳಲ್ಲಿ, ಅಧಿಕಾರಿಗಳೊಂದಿಗೆ ಜಾಗರೂಕರಾಗಿರಬೇಕು. ದೈವಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತೀರಿ. ಸಂಬಂಧಿಕರೊಂದಿಗೆ ಅನಿರೀಕ್ಷಿತ ವಾದ ವಿವಾದಗಳು ಉಂಟಾಗುತ್ತವೆ. ವ್ಯಾಪಾರಿಗಳಿಗೆ ತೊಂದರೆ ಉಂಟಾಗುತ್ತದೆ. ನಿರುದ್ಯೋಗ ಪ್ರಯತ್ನಗಳು ನಿರಾಶಾದಾಯಕವಾಗಿರುತ್ತವೆ.

*ವೃಷಭ ರಾಶಿ.*

ಆಸ್ತಿ ವಿವಾದಗಳಲ್ಲಿ ಹೊಸ ಒಪ್ಪಂದಗಳು ಆಗುತ್ತವೆ. ಮೌಲ್ಯದ ವಸ್ತು ಮತ್ತು ವಾಹನಗಳನ್ನು ಖರೀದಿಸಲಾಗುತ್ತದೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತೀರಿ. ವಿದ್ಯಾರ್ಥಿಗಳು ವಿದೇಶಿ ಪ್ರಯಾಣ ಪ್ರಯತ್ನಗಳಲ್ಲಿ ಪ್ರಮುಖ ಮಾಹಿತಿಯನ್ನು ಪಡೆಯುತ್ತಾರೆ.

*ಮಿಥುನ ರಾಶಿ.*

ಉದರ ಸಂಬಂಧಿ ಖಾಯಿಲೆಗಳು ನೋವುಂಟು ಮಾಡುತ್ತವೆ. ವ್ಯಾಪಾರಸ್ಥರಿಗೆ ನಿರಾಸೆಯ ವಾತಾವರಣವಿರುತ್ತದೆ. ಕೈಗೊಂಡ ಕೆಲಸಗಳು ಮುಂದೆ ಸಾಗುವುದಿಲ್ಲ. ಮನೆಯ ವಾತಾವರಣವು ಕಿರಿಕಿರಿಯುಂಟುಮಾಡುತ್ತದೆ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಉದ್ಯೋಗದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.

*ಕಟಕ ರಾಶಿ.*

ಮನೆಯ ವಾತಾವರಣ ಸಂಭ್ರಮದಿಂದ ಕೂಡಿರುತ್ತದೆ. ವ್ಯಾಪಾರಿಗಳು ಸಕಾಲದಲ್ಲಿ ಹೂಡಿಕೆಯನ್ನು ಸ್ವೀಕರಿಸುತ್ತಾರೆ. ಅಗತ್ಯಕ್ಕೆ ಆಪ್ತ ಸ್ನೇಹಿತರ ಸಹಾಯ ಪಡೆಯುತ್ತೀರಿ. ಸ್ಥಿರಾಸ್ತಿ ವಿಷಯಗಳಲ್ಲಿ ಅಡಚಣೆಗಳು ನಿವಾರಣೆಯಾಗುತ್ತವೆ. ಹೊಸ ವಾಹನ ಯೋಗವಿದೆ, ಉದ್ಯೋಗಿಗಳಿಗೆ ದೀರ್ಘಾವಧಿಯ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.

*ಸಿಂಹ ರಾಶಿ.*

ಹಠಾತ್ ಪ್ರಯಾಣದ ಸೂಚನೆಗಳಿವೆ. ಸಂಬಂಧಿಕರೊಂದಿ ಭಿನ್ನಭಿಪ್ರಾಯಗಳು ಉಂಟಾಗುತ್ತವೆ. ಆರೋಗ್ಯ ಕಾರಣಗಳಿಗಾಗಿ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ಹೊಸ ಸಾಲದ ಪ್ರಯತ್ನಗಳು ನಡೆಯುತ್ತವೆ. ವ್ಯಾಪಾರಸ್ಥರಿಗೆ ಗೊಂದಲದ ಪರಿಸ್ಥಿತಿಗಳಿರುತ್ತವೆ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತಾರೆ.

*ಕನ್ಯಾ ರಾಶಿ.*

ವೃತ್ತಿ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತೀರಿ. ದೈವಿಕ ಚಿಂತನೆ ಹೆಚ್ಚಾಗುತ್ತದೆ. ಆರಂಭಿಸಿದ ಹೊಸ ವ್ಯಾಪಾರಗಳು ಲಾಭವನ್ನು ಪಡೆಯುತ್ತವೆ. ಉದ್ಯೋಗ ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಪರಿಚಯಗಳು ಹೆಚ್ಚಾಗುತ್ತವೆ. ಉದ್ಯೋಗಿಗಳು ಕೆಲಸ ಒತ್ತಡ ಹೆಚ್ಚಾದರು ನಿಧಾನವಾಗಿ ಪೂರ್ಣಗೊಳಿಸುತ್ತೀರಿ.

*ತುಲಾ ರಾಶಿ.*

ವಾಹನ ವ್ಯಾಪಾರಿಗಳು ವಿಶೇಷ ಲಾಭವನ್ನು ಪಡೆಯುತ್ತೀರಿ. ಸ್ಥಿರಾಸ್ತಿಗಳನ್ನು ಖರೀದಿಸುತ್ತೀರಿ. ದೇವಸ್ಥಾನಕ್ಕೆ ಭೇಟಿ ನೀಡುತ್ತೀರಿ . ಆತ್ಮೀಯ ಸ್ನೇಹಿತರೊಂದಿಗೆ ಸಾಮರಸ್ಯದಿಂದ ವ್ಯವಹರಿಸುತ್ತೀರಿ. ಹಣಕಾಸಿನ ಪ್ರಗತಿ ಉಂಟಾಗುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳ ನೆರವಿನಿಂದ ಹೊಸ ಅವಕಾಶಗಳು ಸಿಗುತ್ತವೆ.

*ವೃಶ್ಚಿಕ ರಾಶಿ.*

ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗುತ್ತದೆ, ಕುಟುಂಬ ಸದಸ್ಯರ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಅಲ್ಪ ಲಾಭ ದೊರೆಯುತ್ತದೆ. ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಮಾತಿಗೆ ಒಪ್ಪುವುದಿಲ್ಲ. ಉದ್ಯೋಗದ ವಾತಾವರಣವು ಗೊಂದಲಮಯವಾಗಿರುತ್ತದೆ. ಆರ್ಥಿಕ ವಾತಾವರಣ.

*ಧನುಸ್ಸು ರಾಶಿ.*

ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಸಹೋದರರೊಂದಿಗೆ ಸ್ಥಿರಾಸ್ತಿಯ ವಿವಾದಗಳಿರುತ್ತವೆ. ಆಗತ್ಯಯಕ್ಕೆ ಕೈಯಲ್ಲಿ ಹಣ ಇರುವುದಿಲ್ಲ. ಉದ್ಯೋಗಿಗಳು ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

*ಮಕರ ರಾಶಿ.*

ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ. ವ್ಯವಹಾರಗಳಲ್ಲಿ ನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಕೈಗೊಂಡ ಕೆಲಸದಲ್ಲಿ ಕಾರ್ಯ ಸಿದ್ಧಿ ಉಂಟಾಗುತ್ತದೆ. ಉದ್ಯೋಗದ ವಾತಾವರಣವು ಶಾಂತಿಯುತವಾಗಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಯೋಗವಿದೆ.

*ಕುಂಭ ರಾಶಿ.*

ಮಿತ್ರರಿಂದ ಶುಭ ಸುದ್ದಿ ದೊರೆಯುತ್ತದೆ. ಭೂ ವಿವಾದಗಳು ಬಗೆಹರಿಯುತ್ತವೆ. ವೃತ್ತಿ ಮತ್ತು ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಆರ್ಥಿಕ ಸಮೃದ್ಧಿ ಉಂಟಾಗುತ್ತದೆ. ನಿರುದ್ಯೋಗಿಗಳ ನಿರೀಕ್ಷೆಗಳು ನಿಜವಾಗುತ್ತವೆ. ಉದ್ಯೋಗಿಗಳಿಗೆ ತಮ್ಮ ಪ್ರತಿಭೆಗೆ ಉತ್ತಮ ಮನ್ನಣೆ ದೊರೆಯುತ್ತದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.

*ಮೀನ ರಾಶಿ.*

ವ್ಯರ್ಥ ಖರ್ಚುಗಳು ಹೆಚ್ಚಾಗುತ್ತದೆ. ಪ್ರಮುಖ ಕಾರ್ಯಗಳು ಮುಂದೂಡಲ್ಪಡುತ್ತವೆ. ಬಂಧುಗಳೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ ಮತ್ತು ಅನಾರೋಗ್ಯದ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗುತ್ತದೆ. ಪ್ರಯಾಣದಲ್ಲಿ ಹಠಾತ್ ಬದಲಾವಣೆಗಳಿರುತ್ತವೆ. ವ್ಯಾಪಾರಿಗಳಿಗೆ ನಿರಾಸೆಯ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಪರಿಸ್ಥಿತಿಗಳು ಅಷ್ಟು ಅನುಕೂಲಕರವಾಗಿರುವುದಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande