ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿಗೆ ಅರ್ಜಿ ಆಹ್ವಾನ
ರಾಯಚೂರು, 30 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರವಾಸೋದ್ಯಮ ಇಲಾಖೆಯಿಂದ 2024-25ನೇ ಸಾಲಿನ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು
ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿಗೆ ಅರ್ಜಿ ಆಹ್ವಾನ


ರಾಯಚೂರು, 30 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರವಾಸೋದ್ಯಮ ಇಲಾಖೆಯಿಂದ 2024-25ನೇ ಸಾಲಿನ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಅರ್ಹ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯಲ್ಲಿ ಆಹಾರ ಮತ್ತು ಪಾನೀಯ ಸೇವಾ ಸ್ಟೀವರ್ಡ್‍ಗೆ ಕನಿಷ್ಠ 10ನೇ ತರಗತಿ ಪಾಸ್ ಆಗಿರುವ 20 ರಿಂದ 45 ವರ್ಷಗಳೊಗಿರಬೇಕು. 15 ವಾರಗಳ ಕಾಲ ತರಬೇತಿ ನೀಡಲಾಗುವುದು.

ಕೊಠಡಿ ಪರಿಚಾರಕ ತರಬೇತಿಗೆ ಕನಿಷ್ಠ 5ನೇ ತರಗತಿ ಪಾಸ್ ಆಗಿರುವ ಪಾಸ್ ಆಗಿರುವ 20 ರಿಂದ 45 ವರ್ಷಗಳೊಗಿರಬೇಕು. 15 ವಾರಗಳ ಕಾಲ ತರಬೇತಿ ನೀಡಲಾಗುವುದು.

ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿಗೆ ಕನಿಷ್ಠ 12ನೇ ತರಗತಿ ಪಾಸ್ ಆಗಿರುವ 20 ರಿಂದ 45 ವರ್ಷಗಳೊಗಿರಬೇಕು. 20 ವಾರಗಳ ಕಾಲ ತರಬೇತಿ ನೀಡಲಾಗುವುದು.

ಮಲ್ಟಿ ಕಸಿನ್ ಕುಕ್ ತರಬೇತಿಗೆ 8ನೇ ತರಗತಿ ಪಾಸ್ ಆಗಿರುವ 20 ರಿಂದ 45 ವರ್ಷಗಳೊಗಿರಬೇಕು. 20 ವಾರಗಳ ಕಾಲ ತರಬೇತಿ ನೀಡಲಾಗುವುದು.

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ/ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿಗೆ ಆಸಕ್ತರು ಸೆ.11ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಜೀರಆಮದ ಕನವಳ್ಳಿ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಗಣೇಶ ಗುಡಿ ಹತ್ತಿರ ನಿಜಲಿಂಗಪ್ಪ ಕಾಲೋನಿ, ರಾಯಚೂರು-584101 ದೂರವಾಣಿ ಸಂಖ್ಯೆ: 08532-200677 ಕಛೇರಿಗೆ ಕರ್ತವ್ಯದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande