ರಾಯಚೂರು, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉಪ ಲೋಕಾಯುಕ್ತರಾದ ಬಿ ವೀರಪ್ಪ ಹೈದ್ರಾಬಾದ್ ರಸ್ತೆಯಲ್ಲಿನ ನೀರು ಶುದ್ಧೀಕರಣ ಘಟಕಕ್ಕೆ ಅನಿರೀಕ್ಷಿತ ಭೇಟಿ ನೀಡಿದರು.
ಅಲ್ಲಿಂದ ನೇರವಾಗಿ ಯಕ್ಲಾಸಪುರ ಗ್ರಾಮದ ಬಳಿಯಲ್ಲಿನ ಘನ ತ್ಯಾಜ್ಯ ಸಂಪನ್ಮೂಲ ಪುನರ್ಬಳಕೆ ನಿರ್ವಹಣಾ ಘಟಕಕ್ಕೆ ತೆರಳಿ ಪರಿಶೀಲಿಸಿದರು.
ಈ ಘಟಕದಲ್ಲಿ ಘನ ತ್ಯಾಜ್ಯ ಹೀಗೇಕೆ ಬಿದ್ದಿದೆ. ಕಸ ಹೀಗೆ ಗುಡ್ಡಿಯಾಗಿ ಬಿದ್ದು ಎಷ್ಟು ವರ್ಷಗಳಾಗಿವೆ. ಇದನ್ನು ವಿಲೇ ಮಾಡಲು ತೊಂದರೆ ಏನು? ಎಂದು ಇದೆ ವೇಳೆ ಉಪ ಲೋಕಾಯುಕ್ತರು, ರಾಯಚೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಪರಿಸರ ಅಭಿಯಂತರರಿಗೆ ಪ್ರಶ್ನಿಸಿದರು.
ಈ ಘನ ತ್ಯಾಜ್ಯ ವಿಲೇಗೆ ಅನುದಾನ ಬಂದಿದೆ. ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.
ರಾಶಿ ರಾಶಿಯಾಗಿ ಕಸ ಬಿದ್ದು, ಅದರ ಮೇಲೆ ಗಿಡಗಳು ಬೆಳೆದರು ಇದರ ವಿಲೆಗೆ ವಿಳಂಬ ಮಾಡಿದ್ದು ಅಕ್ಷಮ್ಯ ಎಂದು ಉಪ ಲೋಕಾಯುಕ್ತರು ಆಕ್ರೋಶ ವ್ಯಕ್ತಪಡಿಸಿ ಸ್ವಯಂ ಪ್ರೇರಣೆ ಪ್ರಕರಣ ದಾಖಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್