ಚಿಕ್ಕಸೂಗುರ ಬಳಿಯ ಜಲ ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತರ ಭೇಟಿ
ರಾಯಚೂರು, 30 ಆಗಸ್ಟ್ (ಹಿ.ಸ.) : ಆ್ಯಂಕರ್ : ಚಿಕ್ಕಸೂಗುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಅಧೀನದಲ್ಲಿ ನಿರ್ಮಿಸಲಾದ 10.00 ಎಂಎಲ್ ಡಿ ಸಾಮರ್ತ್ಯದ ಜಲ ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತರಾದ ಬಿ‌ ವೀರಪ್ಪ ಭೇಟಿ ನೀಡಿದರು. ಅಲ್ಲಿನ ಪ್ರಯ
ಚಿಕ್ಕಸೂಗುರ ಬಳಿಯ ಜಲ ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತರ ಭೇಟಿ


ಚಿಕ್ಕಸೂಗುರ ಬಳಿಯ ಜಲ ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತರ ಭೇಟಿ


ರಾಯಚೂರು, 30 ಆಗಸ್ಟ್ (ಹಿ.ಸ.) :

ಆ್ಯಂಕರ್ : ಚಿಕ್ಕಸೂಗುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಅಧೀನದಲ್ಲಿ ನಿರ್ಮಿಸಲಾದ 10.00 ಎಂಎಲ್ ಡಿ ಸಾಮರ್ತ್ಯದ ಜಲ ಶುದ್ಧೀಕರಣ ಘಟಕಕ್ಕೆ ಉಪ ಲೋಕಾಯುಕ್ತರಾದ ಬಿ‌ ವೀರಪ್ಪ ಭೇಟಿ ನೀಡಿದರು.

ಅಲ್ಲಿನ ಪ್ರಯೋಗಾಲಯದಲ್ಲಿನ ಕೆಮಿಕಲ್, ಸಾಮಗ್ರಿ ಮತ್ತು ಇನ್ನೀತರ ಘಟಕಗಳ ವೀಕ್ಷಣೆ ನಡೆಸಿ ನೀರು ಶುದ್ಧೀಕರಣದ ವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಘಟಕದಿಂದ ರಾಯಚೂರ ಸಿಟಿಗೆ ಪ್ರತಿ ದಿನ 40 ಎಂಎಲ್ ಡಿ ನೀರು ಸರಬರಾಜು ‌ಮಾಡಲಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ತಿಳಿಸಿದರು.

ನೀರು ಶುದ್ಧೀಕರಿಸಲು ಬಳಸುವ ಆಲಂ ಮತ್ತು ಬ್ಲಿಚಿಂಗ್ ಪೌಡರನ್ನು ಉಪ ಲೋಕಾಯುಕ್ತರು ಇದೆ ವೇಳೆ ಪರಿಶೀಲಿಸಿದರು.

ಕೃಷ್ಣ ನದಿ ನೀರಿನ ಸದ್ಯದ ಸ್ಥಿತಿ, ನೀರಿನ ಪರೀಕ್ಷೆ ಸೇರಿದಂತೆ ನಾನಾ ಮಾಹಿತಿ ಪಡೆದುಕೊಂಡರು.

ಶಿಸ್ತಿನ ಪಾಠ: ಜಲ ಶುದ್ದೀಕರಣ ಘಟಕದಲ್ಲಿ ನಿತ್ಯ ಕೆಲಸ ಮಾಡುವ ಸಿಬ್ಬಂದಿಗೆ ಇದೆ ವೇಳೆ ಉಪ ಲೋಕಾಯುಕ್ತರು ಆರೋಗ್ಯದ ಪಾಠ ಮಾಡಿದರು. ಘಟಕದಲ್ಲಿ ಶುಚಿತ್ವ ಇರಬೇಕು. ಕಾಲಾವಧಿ ನೋಡಿ ವಸ್ತುಗಳ ಬಳಕೆ ಮಾಡಬೇಕು. ವೈಯಕ್ತಿಕ ಆರೋಗ್ಯದ ಬಗ್ಗೆ ಕೂಡ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

ಈ ವೇಳೆ ಗೌರವಾನ್ವಿತ ಹಿರಿಯ ದಿವಾಣಿ ನ್ಯಾಯಾಧೀಶರಾದ ಹೆಚ್ ಎ ಸಾತ್ವಿಕ್, ಬೆಂಗಳೂರಿನ ಉಪ ಲೋಕಾಯುಕ್ತ ಕಚೇರಿಯ ಅಪರ ನಿಬಂಧಕರಾದ ರಮಾಕಾಂತ ಚವ್ಹಾಣ್,‌ ಶಿವಾಜಿ ಅನಂತ ನಲವಾಡೆ, ಉಪ ನಿಬಂಧಕರಾದ ಅರವಿಂದ, ರಾಯಚೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸತೀಶ್ ಬಿ.ಚಿಟುಗುಬ್ಬಿ, ಕರ್ನಾಟಕ ಲೋಕಾಯುಕ್ತದ ಡಿಎಸ್ಪಿಗಳಾದ ರವಿ ಪುರಷೋತ್ತಮ, ವಸಂತಕುಮಾರ, ಪೊಲೀಸ್‌ ನಿರೀಕ್ಷಕರಾದ ಕಾಳಪ್ಪ ಬಡಿಗೇರ, ಚಂದ್ರಪ್ಪ, ಸುನೀಲ್‌ ಮೇಗಲಮನಿ, ಶೈಲಜಾ, ನಾಗರತ್ನ ಹಾಗೂ ಲೋಕಾಯುಕ್ತ ಕಚೇರಿಯ ಸಿಬ್ಬಂದಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande