ನಾಗಪುರ ದೀಕ್ಷಾ ಭೂಮಿಗೆ ಹೋಗಿಬರಲು ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನ
ಬಳ್ಳಾರಿ, 30 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರಸ್ತಕ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಗೆ ಅಕ್ಟೋಬರ್ 02 ರಂದು ನಡೆಯಲಿರುವ ಪ್ರವರ್ತನಾ ದಿನಕ್ಕೆ ಹೋಗಿಬರಲು ಅರ್ಹ ಪರಿಶಿಷ್ಟ ಜಾತಿಯ ಯಾತ್ರಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾ
ನಾಗಪುರ ದೀಕ್ಷಾ ಭೂಮಿಗೆ ಹೋಗಿಬರಲು ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನ


ಬಳ್ಳಾರಿ, 30 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರಸ್ತಕ ಸಾಲಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿಗೆ ಅಕ್ಟೋಬರ್ 02 ರಂದು ನಡೆಯಲಿರುವ ಪ್ರವರ್ತನಾ ದಿನಕ್ಕೆ ಹೋಗಿಬರಲು ಅರ್ಹ ಪರಿಶಿಷ್ಟ ಜಾತಿಯ ಯಾತ್ರಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಬಳ್ಳಾರಿ, ಕಂಪ್ಲಿ, ಕುರುಗೋಡು ತಾಲ್ಲೂಕುಗಳಿಂದ ಅರ್ಹರನ್ನು ಆಯ್ಕೆ ಮಾಡಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 04 ರ ವರೆಗೆ ಕೆಕೆಆರ್‌ಟಿಸಿ ಅಥವಾ ಇತರೆ ಸಾರಿಗೆ ಬಸ್ ಮತ್ತು ರೈಲಿನ ಮೂಲಕ ಹೋಗಿಬರಲು ಕಳುಹಿಸಿಕೊಡಲಾಗುವುದು.

ಅರ್ಜಿ ಸಲ್ಲಿಸಲು ಸೆ.09 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಆನ್ ಲೈಬ್ ವೆಬ್ ಸೈಟ್ https://swd.karnataka.gov.in/ ನಲ್ಲಿ ಸಲ್ಲಿಸಿ, ಅದರ ಒಂದು ಕಾಪಿಯನ್ನು ಸಹಾಯಕ ನಿರ್ದೇಶಕರು ಗ್ರೇಡ್-1 ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಭವನ, ಬಳ್ಳಾರಿ ಇಲ್ಲಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande