ಕುಷ್ಟಗಿ, 30 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮದ ಸಂಗೀತಾ(30)ಗಂಡ ಶಿವಶರಣಪ್ಪ ನಾಯಕ ಆಗಸ್ಟ್ 13 ರಿಂದ ಕಾಣೆಯಾಗಿದ್ದಾರೆ ಎಂದು ಕುಷ್ಟಗಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಕುಷ್ಟಗಿ .ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:200/2025, ಕಲಂ 00ಎಂಪಿ ಭಾರತೀಯ ನ್ಯಾಯ ಸಂಹಿತೆ-2023 ಮಹಿಳೆ ಕಾಣೆ ರೀತ್ಯ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯು 5 ಅಡಿ ಎತ್ತರ, ದುಂಡು ಮುಖ, ಕೆಂಪು ಮೈ ಬಣ್ಣ, ಸಾದಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದಾಗ ಬಿಳಿ ಬಣ್ಣದ ಹೂವಿನ ಮತ್ತು ಕಾಫಿ ಬಣ್ಣದ ಚೂಡಿದಾರ ವೇಲು ಧರಿಸಿದ್ದಳು. ಕನ್ನಡ ಮತ್ತು ಹಿಂದಿ ಭಾಷೆ, ಮಾತನಾಡುತ್ತಾರೆ. ಈ ಚಹರೆಯ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಕುಷ್ಟಗಿ ಪೊಲೀಸ್ ಠಾಣೆ ಸಿ.ಪಿ.ಐ ದೂ.ಸಂ: 9480803732, ಕುಷ್ಟಗಿ .ಪೊಲೀಸ್ ಠಾಣೆ ಪಿ.ಎಸ್.ಐ ದೂ.ಸಂ: 9480803757, ಗಂಗಾವತಿ ಡಿ.ಎಸ್.ಪಿ ದೂ.ಸಂ: 9480803721 ಹಾಗೂ ಸಂಖ್ಯೆ: 08539-230111 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಕುಷ್ಟಗಿ ಪೊಲೀಸ್ ಠಾಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್