ರೋಚಕ್ ತಿರುವಿನಲ್ಲಿ ಓವಲ್ ಟೆಸ್ಟ್
ಲಂಡನ್, 03 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ನಂತರ ಪಂದ್ಯವು ರೋಚಕ ತಿರುವು ಪಡೆದುಕೊಂಡಿದೆ. ಭಾರತ ತಂಡ ಇಂಗ್ಲೆಂಡ್‌ಗೆ ಗೆಲ್ಲುವ ಗುರಿಯಾಗಿ 374 ರನ್‌ಗಳನ್ನು ನಿಗದಿಪಡಿಸಿದೆ. ದಿನದ ಅಂತ್ಯಕ್ಕೆ ಇಂಗ್ಲೆಂಡ್ 1 ವಿಕೆಟ್
Test


ಲಂಡನ್, 03 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ನಂತರ ಪಂದ್ಯವು ರೋಚಕ ತಿರುವು ಪಡೆದುಕೊಂಡಿದೆ.

ಭಾರತ ತಂಡ ಇಂಗ್ಲೆಂಡ್‌ಗೆ ಗೆಲ್ಲುವ ಗುರಿಯಾಗಿ 374 ರನ್‌ಗಳನ್ನು ನಿಗದಿಪಡಿಸಿದೆ. ದಿನದ ಅಂತ್ಯಕ್ಕೆ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿದೆ. ಇನ್ನೂ 324 ರನ್ ಬೇಕಾದ ಇಂಗ್ಲೆಂಡ್ ತಂಡದ ಎದುರು, ಭಾರತಕ್ಕೆ ಗೆಲ್ಲಲು 9 ವಿಕೆಟ್‌ಗಳ ಅವಶ್ಯಕತೆ ಇದೆ.

ಭಾರತದ ಎರಡನೇ ಇನ್ನಿಂಗ್ಸ್ ಪ್ರಾರಂಭದಲ್ಲಿ ಕಳಪೆ ಪ್ರದರ್ಶನವಾದರು , ಯಶಸ್ವಿ ಜೈಸ್ವಾಲ್ (118) ಮತ್ತು ರಾತ್ರಿ ಕಾವಲುಗಾರನಾಗಿ ಬಂದ ಆಕಾಶ್‌ದೀಪ್ (66) ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು. ನಂತರ ಜಡೇಜಾ (53), ಜುರೆಲ್ (34) ಮತ್ತು ವಾಷಿಂಗ್ಟನ್ ಸುಂದರ್ (53) ಅವರ ಉತ್ತಮ ಆಟ ಭಾರತವು 374 ರನ್‌ಗಳ ಮುನ್ನಡೆ ಗಳಿಸಲು ಸಾಧ್ಯವಾಯಿತು.

ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಜೋಶ ಟಂಗ್ ಉತ್ತಮ ಬೌಲಿಂಗ್ ಪ್ರದರ್ಶಿಸಿ 5 ವಿಕೆಟ್ (125 ರನ್) ಪಡೆದರು. ಗಸ್ ಎಚಿನ್ಸನ್ 3 ಮತ್ತು ಜೇಮೀ ಓವರ್ಟನ್ 2 ವಿಕೆಟ್ ಪಡೆದರು. ಆದರೆ ಕ್ರಿಸ್ ವೋಕ್ಸ್ ಗಾಯದಿಂದ ನಿರ್ಗಮಿಸಿದ್ದರಿಂದ, ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಹಿನ್ನಡೆ ಅನುಭವಿಸಿತು.

ಇಂಗ್ಲೆಂಡ್ ಇನ್ನಿಂಗ್ಸ್: ಮೊಹಮ್ಮದ್ ಸಿರಾಜ್ ಅವರಿಂದ ಜಾಕ್ ಕ್ರೌಲಿ (14) ಔಟಾಗಿದ್ದು. ಬೆನ್ ಡಕೆಟ್ (34)* ಅಜೇಯರಾಗಿದ್ದು ಇನ್ನಷ್ಟು ಭರವಸೆ ಮೂಡಿಸುತ್ತಿದ್ದಾರೆ.

ಇಂದಿನ ಆಟದ ನಂತರ, ಪಂದ್ಯವು ಅಂತಿಮ 2 ದಿನಗಳಲ್ಲಿ ಯಾವುದೇ ಬದಲಾಗಬಹುದಾದ ರೋಚಕ ಸ್ಥಿತಿಗೆ ತಲುಪಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande