ಒಡಿಶಾ-ಜಾರ್ಖಂಡ್ ಗಡಿಯಲ್ಲಿ ನಕ್ಸಲರಿಂದ ರೈಲು ಹಳಿ ಸ್ಪೋಟ
ಭುವನೇಶ್ವರ, 03 ಆಗಸ್ಟ್ (ಹಿ.ಸ.) : ಆ್ಯಂಕರ್ : ಮಾವೋವಾದಿಗಳ ''ಶಹೀದ್ ಸಪ್ತಾಹ''ನ ಕೊನೆಯ ದಿನದಂದು, ಶಂಕಿತ ನಕ್ಸಲರು ಒಡಿಶಾ-ಜಾರ್ಖಂಡ್ ಗಡಿಭಾಗದ ಸಾರಂಡಾ ಅರಣ್ಯದಲ್ಲಿ ರೈಲ್ವೆ ಹಳಿ ಸ್ಫೋಟಿಸಿದ್ದಾರೆ. ಈ ಘಟನೆ ಜಾರ್ಖಂಡ್‌ನ ಕರಂಪಡ ಮತ್ತು ಒಡಿಶಾದ ರಂಗೇಡಾ ನಿಲ್ದಾಣಗಳ ನಡುವೆ ನಡೆದಿದ್ದು, ಬಿಮಲ್‌
ಒಡಿಶಾ-ಜಾರ್ಖಂಡ್ ಗಡಿಯಲ್ಲಿ ನಕ್ಸಲರಿಂದ ರೈಲು ಹಳಿ ಸ್ಪೋಟ


ಭುವನೇಶ್ವರ, 03 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮಾವೋವಾದಿಗಳ 'ಶಹೀದ್ ಸಪ್ತಾಹ'ನ ಕೊನೆಯ ದಿನದಂದು, ಶಂಕಿತ ನಕ್ಸಲರು ಒಡಿಶಾ-ಜಾರ್ಖಂಡ್ ಗಡಿಭಾಗದ ಸಾರಂಡಾ ಅರಣ್ಯದಲ್ಲಿ ರೈಲ್ವೆ ಹಳಿ ಸ್ಫೋಟಿಸಿದ್ದಾರೆ.

ಈ ಘಟನೆ ಜಾರ್ಖಂಡ್‌ನ ಕರಂಪಡ ಮತ್ತು ಒಡಿಶಾದ ರಂಗೇಡಾ ನಿಲ್ದಾಣಗಳ ನಡುವೆ ನಡೆದಿದ್ದು, ಬಿಮಲ್‌ಗಢ ವಿಭಾಗದ ಹಳಿ ತೀವ್ರ ಹಾನಿಗೊಳಪಟ್ಟಿದೆ. ಘಟನೆಯ ಸಮಯದಲ್ಲಿ ರೈಲು ಇಲ್ಲದಿದ್ದರಿಂದ ಅಪಾಯ ತಪ್ಪಿದೆ.

ಘಟನೆಯ ನಂತರ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಸಿಆರ್‌ಪಿಎಫ್, ಜಾಗ್ವಾರ್ ಪಡೆಗಳು ಮತ್ತು ಸ್ಥಳೀಯ ಪೊಲೀಸ್‌ರಿಂದ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande